ಕುಶಾಲನಗರ, ಮೇ 11: ಕುಶಾಲನಗರ ತಾಲ್ಲೂಕು ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಭಾನುವಾರ ಬಲಿಜ ಕುಲಗುರು ಶ್ರೀ ಕೈವಾರ ತಾತಯ್ಯನವರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಯೋಗಿ ನಾರೇಯಣ ಶ್ರೀಗಳ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇಟ್ಟು ಬೈಲಕೊಪ್ಪದ ಮುಖ್ಯ ರಸ್ತೆ ಹಾಗೂ ಕುಶಾಲನಗರ ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಗಾಯತ್ರಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ಮಾಲ್ದಾರೆಯ ಮುತ್ತಪ್ಪ ಚೆಂಡ ಮೇಳಂ ತಂಡದವರಿಂದ ಆಕರ್ಷಕವಾದ ಚಂಡೆ ನೋಡುಗ ಭಕ್ತರ ಗಮನಸೆಳೆಯಿತು. ಮೆರವಣಿಗೆಯಲ್ಲಿ ಕುಶಾಲನಗರ, ಬೈಲಕೊಪ್ಪ ಆಸುಪಾಸುಗಳ ಗ್ರಾಮಗಳ ನೂರಾರು ಮಂದಿ ಬಲಿಜ ಬಂಧುಗಳು ಭಾಗವಹಿಸಿ ಗಮನಸೆಳೆದರು.
ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಆರ್.ಬಾಬಣ್ಣ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾರಾಜ ಕಾಲೇಜಿನ ಉಪನ್ಯಾಸಕ ಡಾ.ಎಸ್.ಕಿತ್ತೂರು ಕೃಷ್ಣಪ್ಪ, ಖ್ಯಾತ ಅಂಕಣಕಾರರಾದ ಡಾ.ಗುಬ್ಬಿಗೂಡು ರಮೇಶ್, ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಡಿ.ಸುಬ್ರಮಣಿ, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ ಉಪಸ್ಥಿತರಿದ್ದರು.
ಹಾಗೆಯೇ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಬೈಲಕೊಪ್ಪ ಗ್ರಾಪಂ ಅಧ್ಯಕ್ಷ ರಘು, ಉಪಾಧ್ಯಕ್ಷೆ ಗೀತಾ ಸುಬ್ರಮಣ್ಯ, ಸದಸ್ಯ ಬಾಲಾಜಿ ರಘು, ಭುವನಹಳ್ಳಿ ಗ್ರಾಪಂ ಅಧ್ಯಕ್ಷ ಜೋಗನಹಳ್ಳಿ ದೇವರಾಜು, ಬಾಳೆಲೆಯ ಪ್ರಾಂಶುಪಾಲೆ ಗೀತಾ ನಾಯ್ಡು, ಕೊಪ್ಪ ಸಹಕಾರ ಸಂಘದ ನಿರ್ದೇಶಕ ಸುಬ್ರಮಣ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಲಿಜ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಎಂ.ಆರ್.ಗಣೇಶ್, ಎನ್.ಸ್ವಾಮಿ, ಗೌರವಾಧ್ಯಕ್ಷ ಟಿ.ಎಸ್.ಬಾಲಕೃಷ್ಣ, ಟಿ.ಡಿ.ದಯಾನಂದ, ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್, ಖಜಾಂಚಿ ಟಿ.ಬಿ.ಸತೀಶ್, ಸಂಚಾಲಕ ಆರ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಸ್.ಮದನ್, ನಿರ್ದೇಶಕರಾದ ಎಸ್.ಎ.ಶ್ರೀನಿವಾಸ್, ಕೆ.ಬಾಲಸುಬ್ರಮಣ್ಯಂ, ಧರ್ಮ, ಕಿರಣ್, ಸಿ.ಕೆ.ಕಾಂತರಾಜ್, ಚಂದಗನಹಳ್ಳಿ ಮಹೇಶ್, ಸೋಮಶೇಖರ್, ಸವಿತಾ ದಯಾನಂದ, ಟಿ.ಆರ್.ಜಗದೀಶ್ ಸೇರಿದಂತೆ ಇನ್ನಿತರರು ಇದ್ದರು.
ಸಂಗೀತ ಗುರು ಬಿ.ಸಿ.ಶಂಕರಯ್ಯ ಪ್ರಾರ್ಥನಾ ಗೀತೆ ಹಾಡಿದರು.
ಕೊಡಗರಹಳ್ಳಿ ಶಿಕ್ಷಕಿ ಟಿ.ಎಲ್.ಸುಮಾ ಸ್ವಾಗತಿಸಿದರು.
ಕಾರ್ಯದರ್ಶಿ ನಿರಂಜನ್ ವಂದಿಸಿದರು.
Back to top button
error: Content is protected !!