ಅರಣ್ಯ ವನ್ಯಜೀವಿ

ದುಬಾರೆ ಮೀಸಲು ಅರಣ್ಯದಲ್ಲಿ ಕಾಡುಕೋಣಗಳ ಹತ್ಯೆ: ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕುಶಾಲನಗರ, ಮೇ 10: ಕುಶಾಲನಗರ ವಲಯ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದಲ್ಲಿ ಮಾಲ್ದಾರೆ ಶಾಖೆಯ ಘಟ್ಟದಳ ಗಸ್ತಿನಲ್ಲಿ ದಿನಾಂಕ 26-03-2025ರಂದು ಅಕ್ರಮವಾಗಿ ದುಬಾರೆ ಮೀಸಲು ಅರಣ್ಯಕ್ಕೆ ಪ್ರವೇಶಸಿ 02 ಕಾಡುಕೋಣಗಳನ್ನು ಹತ್ಯೆ ಮಾಡಿ ಮಾಂಸವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖಾ ಸಿಬ್ಬಂದಿಗಳು ಗುಂಡು ಶಬ್ದದಿಂದ ಜಾಗೃತಗೊಂಡು ತಪಾಸಣೆಗೆ ತೆರಳಿದಾಗ ತಪ್ಪಿಸಿಕೊಂಡು ಪರಾರಿಯಾಗಿರುತ್ತಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ವಲಯದಲ್ಲಿ WLOR-08/2024-25 ದಿನಾಂಕ 28-03-2025 ಅನ್ನು ದಾಖಲಿಸಿಕೊಂಡು ಭಾಸ್ಕರ್ ಬಿ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ, ಮಡಿಕೇರಿ ಹಾಗೂ ಎ.ಎ.ಗೋಪಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸೋಮವಾರಪೇಟೆ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ಕೆ. ಅಸ್ಕರ್ S/O ಕುಂಞಕುಟ್ಟಿ, ಕೂಡುಗದ್ದೆ ಸಿದ್ಧಾಪುರ ಹಾಗೂ ಹೆಚ್.ಆರ್.ವಿನೋದ್ ಕುಮಾರ್ S/O ಹೆಚ್.ಪಿ. ರವಿ ಹೈಸ್ಕೂಲ್ – ಪೈಸಾರಿ ಸಿದ್ದಾಪುರ, ಎಂಬವರನ್ನು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿರುತ್ತಾರೆ. ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ..

ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಮಾಲ್ದಾರೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ಹಂಝ, ಆರ್ ಎಸ್ ವೆಂಕಟೇಶ, ಜಗದೀಶ, ಸಂಪತ್ ಕುಮಾ‌ರ್ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!