ಕಾರ್ಯಕ್ರಮ

10 ಲಕ್ಷ ವೆಚ್ಚದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ

ಕುಶಾಲನಗರ, ಮೇ.10: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಪ್ರೌಢಶಾಲಾಗೆ 1988-91ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಸಹಪಾಠಿ ವಿದ್ಯಾರ್ಥಿಗಳ ಸಂಘಟನೆಯ ಮೂಲಕ ನೂತನವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡವನ್ನು ಸಿದ್ದಲಿಂಗಪುರ ಗ್ರಾಮದ ಸಮಾಜ ಸೇವಕ, ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿಯಾದ ನಾಪಂಡ ಮುತ್ತಪ್ಪ ಉದ್ಘಾಟಿಸಿದರು.
ನಂತರ ಮಾತಾನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಜನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿನ ಯಶಸ್ಸಿಗೆ ಕಾರಣಿಭೂತವಾದ ವಿದ್ಯಾಸಂಸ್ಥೆ, ಮತ್ತು ವಿದ್ಯೆಯನ್ನು ಕಲಿಸಿದ ಗುರುಗಳನ್ನು ನೆನೆದರೆ ತಮ್ಮ ಬದುಕು ಹಸನುಗೊಳ್ಳುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾಕುಮಾರಿ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿ ನಾಪಂಡ ಮುದ್ದಪ್ಪ, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಮೋಹನ್, ಬನಶಂಕರಿ ದೇವಾಲಯ ಸಮಿತಿ ಖಜಾಂಚಿ ಸೋಮಣ್ಣ, ಪ್ರೌಢಶಾಲಾ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಚಂದ್ರು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜ್ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಹಪಾಠಿಗಳ ಪ್ರಮುಖರಾದ ಮಾಜಿ ಸೈನಿಕ ಪುಟ್ಟೆಗೌಡ, ಗುತ್ತಿಗೆದಾರ ಕೆ.ಆರ್. ದಿನೇಶ್, ಶಿಕ್ಷಕ ಕುಮಾರ್, ಪೋಲಿಸ್ ಠಾಣಾಧಿಕಾರಿ ಗೀತಾ, ವನಜಾಕ್ಷಿ, ಕುಮಾರ್ ಸೀಗಪುರ್, ಉದಯ, ಸೇರಿದಂತೆ ನೂರಾರು ಸಹಪಾಠಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ನಡುವೆ ವಿವಿಧ ಕ್ರೀಡಾಕೂಟಗಳು ನಡೆದವು. ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಈ ಸಾಲಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ವನಜಾಕ್ಷಿ ಮತ್ತು ನಿಶಾ ಎಂಬ ವಿದ್ಯಾರ್ಥಿಗಳನ್ನು ಮತ್ತು ಸಹಪಾಠಿಯ ಮಕ್ಕಳಾದ ಪಿ.ಯು. ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಶಯಶ್, ಚಂದನಾ ಅವರುಗಳನ್ನು ಗುರುತಿಸಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಉದ್ಯಮಿ ನಾಪಂಡ ಮುದ್ದಪ್ಪ ಬಹುಮಾನ ವಿತರಣೆ ಮಾಡಿದರು. ಕುಮಾರ್ ಸ್ವಾಗತಿಸಿ, ಪುಟ್ಟೆಗೌಡ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!