ಅರಣ್ಯ ವನ್ಯಜೀವಿ

ತೋಡಿಗೆ ರಾಸಾಯನಿಕ ನೀರು ಸೇರ್ಪಡೆ: ಜಲಚರಗಳ ಮಾರಣ ಹೋಮ

ಕುಶಾಲನಗರ, ಮೇ 08: ಹರಿಯುವ ತೋಡಿಗೆ ರಾಸಾಯನಿಕ ನೀರು ಮಿಶ್ರಗೊಂಡ ಕಾರಣ ನೂರಾರು ಮೀನುಗಳು ಮೃತಪಟ್ಟ ಘಟನೆ ಕಂಬಿಬಾಣೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಲಿಹೊಳೆ ಅಣೆಕಟ್ಟೆಗೆ ಸೇರ್ಪಡೆಯಾಗುವ ನೈಸರ್ಗಿಕ ತೋಡಿಗೆ ರಾಸಾಯನಿಕ ಮಿಶ್ರಗೊಂಡಿದೆ. ಇದರಿಂದಾಗಿ ಮೀನುಗಳು ಸೇರಿದಂತೆ ಜಲಚರಗಳು ನೂರಾರು ಸಂಖ್ಯೆಯಲ್ಲಿ ಮೃತಪಟ್ಟಿವೆ. ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವರ್ಗ ಹಾಗೂ ಕಂಬಿಬಾಣೆ ಗ್ರಾಪಂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಸಮೀಪದ ತೋಟಗಳಿಂದ ತೋಡಿಗೆ ರಾಸಾಯನಿಕ ನೀರು ಹರಿದಿರುವ ಶಂಕೆಯಿದ್ದು ಎಲ್ಲಿಂದ ರಾಸಾಯನಿಕ ಹರಿದು ಬಂದಿದೆ ಎಂಬ ಮಾಹಿತಿ ಪತ್ತೆಯಾಗಿಲ್ಲ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!