ಅರಣ್ಯ ವನ್ಯಜೀವಿ

ಆನೆಕಾಡು ಬಳಿ ಕಾರಿನ ಮೇಲೆ ಕಾಡಾನೆ ದಾಳಿ: ಚಾಲಕನಿಗೆ ಗಂಭೀರ ಗಾಯ

ಕುಶಾಲನಗರ, ಮೇ 04: ಕುಶಾಲನಗರದ ಆನೆಕಾಡು ಅರಣ್ಯ ಡಿಪೋ ಬಳಿ ಹೆದ್ದಾರಿಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಹುಬ್ಬಳಿ ಮೂಲದ ಶರೀಫ್ ಮತ್ತು ಕುಟುಂಬ ಮಡಿಕೇರಿಯಿಂದ ಹುಬ್ಬಳಿಗೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಕಾಡಾನೆ ಕಂಡು ಶರೀಫ್ ಓಮಿನಿ ವಾಹನ ನಿಲ್ಲಿಸಿದ್ದಾರೆ. ಈ ಸಂದರ್ಭ ಏಕಾಏಕಿ ಹೆಣ್ಣು ಕಾಡಾನೆ ಸೊಂಡಿಲಿನಿಂದ ಕಾರಿನ ಮೇಲೆ ದಾಳಿ ನಡೆಸಿ ಕಾರು ಜಖಂಗೊಳಿಸಿ ಕಾಡಿನತ್ತ ತೆರಳಿದೆ. ಘಟನೆಯಲ್ಲಿ ಚಾಲಕ ಶರೀಫ್ ಗೆ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯ ಉಂಟಾಗಿದೆ. ಕಾರಿನ ಗಾಜು ಪುಡಿಯಾಗಿ ಈತನ ಪತ್ನಿ ಹಾಗೂ ಪುಟ್ಟ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಇದೇ ಸಂದರ್ಭ ಕುಶಾಲನಗರದಿಂದ ಸುಂಟಿಕೊಪ್ಪ ಕಡೆ ತೆರಳುತ್ತಿದ್ದ ಜಿಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಅವರು ಗಾಯಾಳುಗಳನ್ನು ಕಂಡು ಕೂಡಲೆ ತಮ್ಮ ವಾಹನದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!