ಕುಶಾಲನಗರ, ಮಾ 21 : ಇಲ್ಲಿನ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ವಿಶ್ವ ಅರಣ್ಯ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಅರಣ್ಯ ಪರಿಸರದ ಜನಜಾಗೃತಿಗಾಗಿ ವಸ್ತು ಪ್ರದರ್ಶನ ಏರ್ಪಟಾಗಿತ್ತು.
ಏರುತ್ತಿರುವ ಜಾಗತಿಕ ತಾಪಮಾನದಿಂದ ಆಗುತ್ತಿರುವ ದುಷ್ಪರಿಣಾಮಗಳು, ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಕುತ್ತಿರುವುದರಿಂದ ಅಂತರ್ಜಲದ ಮೇಲಾಗುತ್ತಿರುವ ಪರಿಣಾಮಗಳು, ಅನಗತ್ಯ ವಾಹನಗಳ ಬಳಕೆಯಿಂದ ಹಾಗೂ ಮಿತಿ ಮೀರಿದ ಕೈಗಾರಿಕೆಗಳಿಂದ ಆಗುತ್ತಿರುವ ವಾಯುಮಾಲಿನ್ಯ, ಜಲಮಾಲಿನ್ಯ ಮೊದಲಾದ ಹಲವು ಕುತೂಹಲಕಾರಿ ಅಂಶಗಳ ಬಗ್ಗೆ ಜನಜಾಗೃತಿ ಮೂಡಿಸುವ ವಸ್ತುಪ್ರದರ್ಶನ ವಿದ್ಯಾರ್ಥಿಗಳಿಂದ ರೂಪುಗೊಂಡಿತ್ತು.
ವಸ್ತು ಪ್ರದರ್ಶನವನ್ನು ಅರಣ್ಯ ಇಲಾಖೆಯ ನಿವೃತ್ತ ಡಿಎಫ್ಒ ದಯಾನಂದ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅರಣ್ಯ, ಪರಿಸರ, ಪ್ರಾಣಿ ಸಂಕುಲ ಉಳಿದರೆ ಮಾತ್ರ ಮನುಷ್ಯನ ಉಳಿವು.
ಎಲ್ಲೆಡೆ ಹೆಚ್ಚಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸಬೇಕು.
ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ಅನ್ನು ಬಳಸದಂತೆ ನಿಷೇಧಿಸಬೇಕು.
ವಿದ್ಯಾರ್ಥಿಗಳು ಈ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ಕರೆಕೊಟ್ಟರು. ಕಾಫಿ ಬೆಳೆಗಾರ ಚಿದಾನಂದ,
ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪ್ರಾಂಶುಪಾಲೆ ಟಿ.ಎ.ಲಿಖಿತಾ, ಉಪನ್ಯಾಸಕ ದೇವೇಂದ್ರ,
ಪಿಯು ವಿಭಾಗದ ಪ್ರಾಂಶುಪಾಲೆ ಕ್ಲಾರಾರೇಶ್ಮಾ, ಇದ್ದರು.
ಉಪನ್ಯಾಸಕರಾದ ವಿಕ್ರಂ, ಸೌಮ್ಯಶ್ರೀ, ಭಾಗ್ಯಶ್ರೀ, ನಮಿತಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
Back to top button
error: Content is protected !!