ಕುಶಾಲನಗರ, ಮಾ.21: ಪರೀಕ್ಷಾ ಸಮಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಹಲವು ಸಂಘಟನೆ ಗಳು ಕರೆದಿರುವ 22 ರ ಶನಿವಾರದ ಕರ್ನಾಟಕ ಬಂದ್ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲವಿಲ್ಲ ಎಂದು ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ ತಿಳಿಸಿದ್ದಾರೆ.
ನಮ್ಮ ನಾಡಿನ ನೆಲ ಜಲ ಭಾಷೆಯ ಹಿತ ಕಾಪಾಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟದ
ಮಂಚೂಣಿಯಲ್ಲಿದ್ದು ರಾಜ್ಯಾಧ್ಯಕ್ಷರಾದ ಟಿ ಏ ನಾರಾಯಣ ಗೌಡರ ನೇತೃತ್ವದಲ್ಲಿ ಬೆಳಗಾವಿಗೆ ಸಮಸ್ಯೆ ಹೋಗಿ ಸರಿಪಡಿಸಿದ್ದಾರೆ. ಎಸ್ ಎಲ್ ಸಿ ಪರೀಕ್ಷೆ ಕೂಡ ಇರುವುದರಿಂದ
ವಿದ್ಯಾರ್ಥಿಗಳ ಪರೀಕ್ಷಾ ಸಮಯ ವಾದ್ದರಿಂದ ಬಂದ್ ಮಾಡುವುದರಿಂದ ಅನೇಕ ರೀತಿಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದು,
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Back to top button
error: Content is protected !!