ಕಾರ್ಯಕ್ರಮ

ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಕುಶಾಲನಗರ, ಮಾ 16 : ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಗೊಂದಿಬಸವನಹಳ್ಳಿ ಮುಖ್ಯ ರಸ್ತೆಯನ್ನು ರೂ.1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಸಮೀಪದ ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಂಘದ ವತಿಯಿಂದ ರೂ.15 ಲಕ್ಷ ವೆಚ್ಚದಲ್ಲಿ ನೂತನ ನಿರ್ಮಿಸಿರುವ ಸಂಘದ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಪಶುಪಾಲನೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರೈತರ ಉಪ ಕಸುಬಾದ ಪಶುಪಾಲನೆ ಹಾಗೂ ಹಾಲಿನ‌ ಉತ್ಪಾದನೆಯಿಂದ ರೈತರಿಗೆ ತುಂಬ ಅನುಕೂಲವಾಗುತ್ತಿದೆ.ಹಾಲಿನ ಮಾರಾಟದಿಂದ ರೈತರಿಗೆ ಆದಾಯ ಬರುತ್ತಿದ್ದು,ಇದರಿಂದ ಅನೇಕ ರೈತ ಕುಟುಂಬಗಳು ಅಭಿವೃದ್ಧಿ ಹೊಂದಿವೆ ಎಂದರು.
ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ರೈತರಿಗೆ ಸರಿಯಾಗಿ ಹಣ ಪಾವತಿ
ಮಾಡಲು ಅನುಕೂಲವಾಗುತ್ತದೆ. ಹಾಲಿನ ಉತ್ಪಾದನೆ
ಹೆಚ್ಚಾಳದಿಂದ ರೈತರಿಗೆ ಲಾಭವಾಗುತ್ತದೆ.ಮುಂದಿನ ದಿನಗಳಲ್ಲಿ
ಕೊಡಗಿಗೆ ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾಗಬೇಕು ಎಂಬುದು ನನ್ನ ಅಭಿಲಾಷೆ. ಹಾಲು ಉತ್ಪಾದಕ ಸಂಘಕ್ಕೆ ಶಾಸಕರ ಅನುದಾನದಿಂದ ರೂ.3 ಲಕ್ಷ ಅನುದಾನ ನೀಡಲಾಗಿದೆ ಎಂದರು. 1200 ಲೀಟರ್ ಹಾಲು ಉತ್ಪಾದನೆ ಮಾಡುತ್ತಿರುವ ಈ ಸಂಘ ಮುಂದಿನ ದಿನಗಳಲ್ಲಿ 2000 ಲೀಟರ್‌ ಹಾಲು ಸಂಗ್ರಹಿಸುವಂತೆ ಆಗಲಿ.ಸರ್ಕಾರದ ವತಿಯಿಂದ ಸಿಗುವ ಸಹಾಯಧನವನ್ನು ರೈತರು ಸದ್ಬಳಕ್ಕೆ ಮಾಡಿಕೊಳ್ಳಬೇಕು ಎಂದರು. ಹಾಲುಉತ್ಪಾದಕ ಸೂಟೈಟಿಗಳ ಅಭಿವೃದ್ಧಿ ಕ್ರಮ ಅಗತ್ಯ ನೆರವು ನೀಡಲಾಗುವುದು ಎಂದರು
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಪ್ರತಿಯೊಬ್ಬರ ಮನೆಗಳಿಗೂ ಬೆಳಿಗ್ಗೆ ಹಾಲು,ಪೇಪರ್ ಮುಖ್ಯವಾದ ವಸ್ತು ಆಗಿದೆ. ಪ್ರತಿಯೊಂದು ಪ್ರಾಣಿಗಳಿಗೂ ಹಾಲು ಅಗತ್ಯ.ಆದರೆ ಇತ್ತೀಚಿನ ದಿನಗಳಲ್ಲಿ
ಹಾಲು ಉತ್ಪಾದನೆಗೆ ರೈತರ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಹಸುಗಳನ್ನು ಪೋಷಣೆ ಮಾಡಲು ಜನರಿಂದರೆ ಸಾಧ್ಯವಾಗುತ್ತಿಲ್ಲ.ಈ ಹಿಂದೆ ಜಿಲ್ಲೆಯ ಪ್ರತಿ ಮನೆಯಲ್ಲೂ ಹಸುಗಳು ಇದ್ದವು ಆದರೆ ಈಗ ಬಹತೇಕ ಕ್ಷೀಣವಾಗಿವೆ.ಇದ್ದರಿಂದಾಗಿ ಪಕ್ಕದ ಜೆಲ್ಲೆಯಿಂದ ಹಾಲು ತರಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.ಹಾಲಿನ ದರ ಹೆಚ್ಚಳವಾದರೆ ಉತ್ಪಾದಕರಿಗೆ ಅದರ ಲಾಭ ದೊರೆಯಲಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ ಎಂದರು.
ಕುಶಾಲನಗರ ತಾಲ್ಲೂಕು ಹಾಲು ಉತ್ಪಾದನೆಗೆ ಪೂರಕ ವಾತಾವರಣ ಇದೆ. ಗೊಂದಿಬಸವನಹಳ್ಳಿಯ ಹಾಲು ಉತ್ಪಾದಕರ ಸಂಘ ಹತ್ತು ವರ್ಷದಲ್ಲಿ ಜಾಗ ಖರೀದಿ‌ ಮಾಡಿ ರೂ.15 ಲಕ್ಷ ಹಣದಲ್ಲಿ ಹೊಸ ಮಾಡಿರುವುದು ಸಂಘದ ಆಡಳಿತ ಮಂಡಳಿಯ ಕಾರ್ಯಚಟುವಟಿಕೆ ಹಾಗೂ ಕಾರ್ಯಬದ್ಧತೆ ಕಾರಣವಾಗಿದ್ದು, ಈ ಸಂಘ ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೈನುಗಾರಿಕೆಗೆ ರೈತರಿಗೆ ರೂ.2 ಲಕ್ಷ ಶೂನ್ಯ ಬಡ್ಡಿಯಲ್ಲಿ ಸರ್ಕಾರ ಸಾಲ ಸೌಲಭ್ಯ ನೀಡುತ್ತಿದ್ದು, ರೈತರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಜಿಲ್ಲೆಯ ಕೂಡಿಗೆಯಲ್ಲಿರುವ ಡೈರಿ
ಮದರ್ ಡೈರಿಯಾಗಿದೆ.ಇದು ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಗೊಂಡ ಡೈರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ
38 ಹಾಲು ಉತ್ಪಾದಕರ ಸಂಘಗಳಿದ್ದು, ಇವುಗಳಿಂದ ಕೇವಲ 17 ಸಾವಿರ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದೆ. ಆದ್ದರಿಂದ ಕೊಡಗಿಗೆ ಪ್ರತ್ಯೇಕ ಒಕ್ಕೂಟ ಮಾಡಲು ಕಷ್ಟ ಸಾಧ್ಯವಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಒಂದು ಒಕ್ಕೂಟವಾಗಿದೆ.1978ರಲ್ಲಿ ಸ್ಥಾಪನೆಗೊಂಡ ಹಾಸನ ಒಕ್ಕೂಟದಲ್ಲಿ ಈಗ 11.5 ಲಕ್ಷ ಹಾಲು ಶೇಖರಣೆ ಆಗುತ್ತಿದೆ.ಇದರಲ್ಲಿ 2 ಲಕ್ಷ ಮಾತ್ರ ಮಾರಾಟವಾಗುತ್ತಿದೆ.
ಉಳಿದ 9.5 ಲಕ್ಷ ಲೀಟರ್ ಇತರೆ ಉತ್ಪನ್ನಗಳಿಗೆ ಬಳಕೆ ಯಾಗುತ್ತಿದೆ ಎಂದರು.
ರೂ.8 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆಯಾಗುತ್ತಿದೆ. ಆದ್ದರಿಂದ ರೈತರು ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.‌ಹಾಲು ಉತ್ಪಾದಕರ‌‌ ಸಂಘದ ಆಡಳಿತ ಮಂಡಳಿ ಮನ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಮಾತ್ರ ಇಂತಹ‌ ಸಾಧನೆ ಮಾಡಲು ಸಾಧ್ಯ. ಕೇವಲ‌ ಹತ್ತು ವರ್ಷದಲ್ಲಿ ಸಂಘಕ್ಕೆ ‌ಜಾಗ ಖರೀದಿಸಿ ಹೊಸ ಕಟ್ಟಡ ನಿರ್ಮಾಣ ‌ಮಾಡಿರುವ‌ ಕಾರ್ಯ ಶ್ಲಾಘನೀಯ ಎಂದರು.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ,ಹಾಲು ಉತ್ಪಾದಕ ಸಹಕಾರ ಉತ್ತಮ ಕಾರ್ಯ ಚಟುವಟಿಕೆ ಮೂಲಕ ಜಿಲ್ಲೆಗೆ ಮಾದರಿಯಾಗಿದೆ.ಸಂಘದ ಏಳಿಗೆಗೆ ಶ್ರಮಿಸುವ ವ್ಯಕ್ತಿಗಳಿಗೆ ಗ್ರಾಮಸ್ಥರು ಸಹಕಾರ ನೀಡಬೇಕು.ಜೊತೆಗೆ ‌ಚುನಾವಣೆಗಳು ಬಂದ ಸಂದರ್ಭದಲ್ಲೂ ಅವರ ಕೈಹಿಡಿಯಬೇಕು ಎಂದರು.
ಸಂಘದ ನಿರ್ದೇಶಕ ಎಂ.ಎಂ.ಪ್ರಕಾಶ್ ಮಾತನಾಡಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಅತೀ ಹೆಚ್ಚಿನ ರೈತರು ಪಶುಪಾಲನೆ ಮಾಡುತ್ತಿದ್ದಾರೆ. ಆದರೆ ಪಶುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕುಶಾಲನಗರಕ್ಕೆ ಹೋಗಬೇಕಾಗಿದೆ.ಆದ್ದರಿಂದ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರ ತೆರಯಬೇಕು ಎಂದು ಮನವಿ‌ ಮಾಡಿದರು.‌ಅದೇ ರೀತಿಯ ಗ್ತಾಮ ಮುಖ್ಯ ರಸ್ತೆ ಅಭಿವೃದ್ಧಿಗೆ ರೂ. 1.5 ಕೋಟಿ ಅನುದಾನ ನೀಡಿರುವ ಶಾಸಕ‌ ಮಂತರ್ ಗೌಡ ಅವರನ್ನು ಅಭಿನಂದಿಸಿದರು.
ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಧುಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್,ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ.ವೀಣಾ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಚ್.ರೋಹಿತ್,ಕುಶಾಲನಗರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಜಿತ್, ಸಂಘದ ಉಪಾಧ್ಯಕ್ಷ ಎಂ.ಎಸ್.ಪ್ರಸನ್ನ, ನಿರ್ದೇಶಕರಾದ ಪ್ರಕಾಶ್,ಡಿ.ಜಿ.ಪ್ರದೀಪ್,ಪಿ.ಪ್ರವೀಣ್,ರುದ್ರೇಶ್,ಜಿ.ಎನ್.ನವೀನ್,ಬಿ.ಎಸ್.ಶಿವಕುಮಾರ್, ಜಿ.ಎಲ್.ಸೋಮಣ್ಣ,ದಿವಾಕರ್,ಡಿ.ಉಷಾ,ಕಮಲಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶ್ರೀನಿವಾಸ್, ಸಿಬ್ಬಂದಿ ಸುಜಾತ ಉಪಸ್ಥಿತರಿದ್ದರು. ಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!