ಕಾರ್ಯಕ್ರಮ

ಶ್ರೀ ಬಯಲು‌ ಬಸವೇಶ್ವರ ದೇವಸ್ಥಾನ‌ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ

ಕುಶಾಲನಗರ, ಫೆ 26: ಕುಶಾಲನಗರ ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯ ಶ್ರೀ ಬಯಲು‌ ಬಸವೇಶ್ವರ ದೇವಸ್ಥಾನ‌ ಸಮಿತಿ ವತಿಯಿಂದ 16ನೇ ವರ್ಷದ ಮಹಾಶಿವರಾತ್ರಿ ಪೂಜೋತ್ಸವ ದೇವಾಲಯ ಆವರಣದಲ್ಲಿ ನಡೆಯಿತು.ಅರ್ಚಕ ಪರಮೇಶ್ವರ ಭಟ್ ಅವರಿಂದ ಪೂಜಾ ಕೈಂಕರ್ಯ ನೆರವೇರಿತು.

ದೇವಾಲಯ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಷ್ಟೇ ಸಂಪತ್ತಿದ್ದರೂ ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ ಮುಖ್ಯ. ದೇವರ ಅನುಗ್ರಹ ಎಲ್ಲರಿಗೂ ಪ್ರಾಪ್ತಿಯಾಗುವಂತಹ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ 8 ಮಂದಿ ಮಾಜಿ ಸೈನಿಕರನು ಹಾಗೂ 7 ಮಂದಿ ನಿವೃತ್ತ ಅಧಿಕಾರಿಗಳು ಹಾಗೂ ಗಣ್ಯರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿವರಾತ್ರಿ ಅಂಗವಾಗಿ‌ ಬಡಾವಣೆ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು‌ ಏರ್ಪಡಿಸಲಾಗಿತ್ತು.

ಈ ಸಂದರ್ಭ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗೀತಾ, ಉದ್ಯಮಿ ಪಳನಿ ಸ್ವಾಮಿ ಸೇರಿದಂತೆ ಸಮಿತಿ‌ ಕಾರ್ಯದರ್ಶಿ ರವಿಕುಮಾರ್ ನಿರ್ದೇಶಕರಾದ ಹೆಚ್.ಆರ್.ಸುರೇಶ್, ಎಂ.ಎನ್.ಮೊಣ್ಣಪ್ಪ, ಲಕ್ಷ್ಮಣ, ಪೊನ್ನಪ್ಪ, ಸತೀಶ್, ಎಸ್.ಕೆ.ಸತೀಶ್, ಲೋಕೇಶ್, ಗಾಯತ್ರಿ, ಯಶುಮತಿ, ಪೂಣಚ್ಚ, ರಮೇಶ್, ಹರೀಶ್, ದಿನೇಶ್ ಇದ್ದರು.
ಇದೇ ಸಂದರ್ಭ ಸಮಿತಿಯ 2024-25ನೇ ಸಾಲಿನ ಮಹಾಸಭೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!