ಕಾರ್ಯಕ್ರಮ

ಕುಶಾಲನಗರ ಜೆಸಿ ಇಂಟರ್ನ್ಯಾಷನಲ್ ಕಾವೇರಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ

ಕುಶಾಲನಗರ, ಜ 17: ಕುಶಾಲನಗರ ಜೆಸಿ ಇಂಟರ್ನ್ಯಾಷನಲ್ ಕಾವೇರಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರ ಸಮೀಪ ಖಾಸಗಿ ರೆಸಾರ್ಟ್ ನಲ್ಲಿ ನಡೆಯಿತು.
ಘಟಕದ 24ನೇ ಅಧ್ಯಕ್ಷರಾಗಿ ತಂಬಂಡ ತೇಜ ದಿನೇಶ್ ಮತ್ತು ತಂಡದ ಸದಸ್ಯರಿಗೆ ಜೆ ಸಿ ವಲಯ ಅಧ್ಯಕ್ಷರಾದ ವಿಜಯಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ
ಸದಸ್ಯರಿಗೆ ವಲಯ ಉಪಾಧ್ಯಕ್ಷರಾದ ಬಿ ಜಗದೀಶ್ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಅಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸ್ಥಾಪಕ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದು ಮಾತನಾಡಿದರು.
ದಿಕ್ಸೂಚಿ ಭಾಷಣಕಾರರಾಗಿ ಜೆಎಸಿ ನಿಕಟಪೂರ್ವ ಅಧ್ಯಕ್ಷ ಎಂ ಡಿ ರಂಗಸ್ವಾಮಿ ಪಾಲ್ಗೊಂಡು ಮಾತನಾಡಿದರು.
ಹಿಂದಿನ ಸಾಲಿನ ಅಧ್ಯಕ್ಷರಾದ ಬಿ ಜಗದೀಶ್ ಅವರು ತಮ್ಮ ಅವಧಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಪೂರ್ವ ಅಧ್ಯಕ್ಷರುಗಳಾದ ರಜನಿಕಾಂತ್, ರಾಜೇಂದ್ರ, ಪ್ರವೀಣ್, ಪುನೀತ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!