ಪ್ರತಿಭಟನೆ

ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ತಿರುಪತಿ ಭಕ್ತರ ಸಮೂಹ ವತಿಯಿಂದ ಮೌನ ಪ್ರತಿಭಟನೆ

ಕುಶಾಲನಗರ, ಸೆ 23 : ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ಕಲಬೆರಕೆ ಮಾಡಿರುವ ಹೇಯಕೃತ್ಯವನ್ನು ಖಂಡಿಸಿ ಸೋಮವಾರ ತಿರುಪತಿ ಭಕ್ತ ಸಮೂಹ ಕುಶಾಲನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ತಿರುಪತಿ ಭಕ್ತರ ಸಮೂಹ ನೂರಾರು ಭಕ್ತರು ಬೈಚನಹಳ್ಳಿ ಮಾರಮ್ಮ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಿರುಪತಿ ಮಹಾ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬೆರಕೆ ಖಂಡಿಸಿ ಮೌನ ಪ್ರತಿಭಟನೆ ಎಂಬ ಬ್ಯಾನರ್ ಹಿಡಿದು ಮಹಿಳೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಗಣಪತಿ ದೇವಾಲಯ ಬಳಿ ಭಕ್ತರು ಸಮಾವೇಶಗೊಂಡರು.

ಸಂದರ್ಭ ಗಣಪತಿ ದೇವಾಲಯ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿದರು.ನೂರಾರು ಕೋಟಿ ಭಕ್ತರ ಆರಾಧ್ಯದೈವ ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾರದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ಹೇಯಕೃತ್ಯವಾಗಿದ್ದು,ಇದನ್ನು ಭಕ್ತರಾದ ನಾವುಗಳು ತೀವ್ರವಾಗಿ ಖಂಡಿಸುತ್ತೇವೆ ಎಂದರು.ದೇವಾಲಯ ಎನ್ನುವುದು ಮೋಕ್ಷಾ ಪ್ರಾಪ್ತಿಗೆ ಹಾಗೂ ಕರ್ಮ ಸಾಧನೆ ಇರುವ ಚೌಕಟ್ಟಿನ ವ್ಯವಸ್ಥೆಯಾಗಿದೆ.ದೇವಾಲಯದ ಪಾವಿತ್ರ್ಯತೆ ಧಕ್ಕೆ ತರುವ ಕೆಲಸ ಯಾರು ಮಾಡಬಾರದು. ವಿಕೃತ ಸಂತೋಷ ಹಾಗೂ ಅಪವಿತ್ರ ಲಾಭಗಳಿಸಬೇಕು ಎಂಬ ಹುನ್ನಾರದಿಂದ ಈ ಅಹಿತಕರ ಘಟನೆ ನಡೆದಿದೆ.ಇದು ಬಹಳ ಶೋಚನೀಯ ಹಾಗೂ ವಿಷಾದನೀಯ. ಇಂತಹ ಘಟನೆಗಳು ನಡೆಯಬಾರದು.
ಇದರಿಂದ ಭಕ್ತರ ನಂಬಿಕೆಗೆ ದೊಡ್ಡ ಪೆಟ್ಟು ಬೀಳಲಿದೆ.
ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ಕಲಬೆರಕೆಯಾಗಿರುವುದು ದೃಢಪಟ್ಟಿರುವುದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ನಿಟ್ಟಿನಲ್ಲಿ ಭಕ್ತರು ಸೇರಿದ್ದೇವೆ ಎಂದರು.

ನಂತರ ರಥ ಬೀದಿ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಪುರಸಭೆ ಸದಸ್ಯ ಅಮೃತ್ ರಾಜ್, ಮುಖಂಡರಾದ ಎಂ.ವಿ.ನಾರಾಯಣ, ಜಿ.ಎಲ್.ನಾಗರಾಜು, ಬೋಸ್ ಮೊಣ್ಣಪ್ಪ,ಎಚ್.ಎಚ್.ಸುಂದರ್,ಎಚ್.ಎಂ.ಮಧುಸೂದನ್, ಡಿ.ವಿ.ರಾಜೇಶ್,ಗಣಪತಿ, ಗೌತಮ್, ಎಂ.ಡಿ.ಕೃಷ್ಣಪ್ಪ, ಪದ್ಮಾಪುರುಷೋತ್ತಮ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!