ಕಾಮಗಾರಿ
ಕುಶಾಲನಗರ ತಹಸೀಲ್ದಾರ್ ಉಸ್ತುವಾರಿಯಲ್ಲಿ ರಸ್ತೆ ನಿರ್ವಹಣೆ ಕಾಮಗಾರಿ

ಕುಶಾಲನಗರ, ಸೆ 22: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆಗಳ ನಿರ್ವಹಣೆ ಮತ್ತು ಕಾಮಗಾರಿ ನಡೆಯಿತು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕುಶಾಲನಗರ ಪಟ್ಟಣ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚುವುದು ಮತ್ತು ಅಗಲೀಕರಣ ಕಾಮಗಾರಿ ಕುಶಾಲನಗರ ತಾಲೂಕು ತಹಸಿಲ್ದಾರ್ ಕಿರಣ್ ಜಿ ಗೌರಯ್ಯ ಅವರ ಉಸ್ತುವಾರಿಯಲ್ಲಿ ನಡೆಯಿತು.
ಕುಶಾಲನಗರ ಪುರಸಭೆ ಇಂಜಿನಿಯರ್ ರಂಗಾರಾಮ್ ಮತ್ತಿತರರು ಇದ್ದರು.



