ಕುಶಾಲನಗರ, ಸೆ 20: ಕುಶಾಲನಗರ ಪಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಗರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಾಜಿ ಕಂದಾಯ ಸಚಿವ, ಹಾಲಿ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಪ್ರತಿಭಟನಾಕಾರರ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ತಹಸೀಲ್ದಾರ್ ಗೆ ತರಾಟೆಗೆ ತೆಗೆದುಕೊಂಡ ಅಶೋಕ್, ರಾಜ್ಯದೆಲ್ಲೆಡೆ ಪಪಂ ಗೆ ಒಂದೇ ಆಕ್ಡ್ ಇರೋದು. ನಾಮನಿರ್ದೇಶಿತರಿಗೆ ಮತದಾನಕ್ಕೆ ಹಕ್ಕು ಕಲ್ಪಿಸಿರುವ ರಾಜ್ಯದಲ್ಲಿ ಎಲ್ಲೂ ಇಲ್ಲದ ವಿಶೇಷ ಕಾನೂನು ನಿನಗೆಲ್ಲಿಂದ ಬಂತು. ಯಾರದ್ದೋ ಮಾತು ಕೇಳಿ ಜೀವನ ಹಾಳುಮಾಡಿಕೊಳ್ಳಬೇಡ. ನಿವೃತ್ತಿಯಾದರೂ ಕೂಡ ನಿಮ್ಮನ್ನು ಬಿಡೋದಿಲ್ಲ, ಪೆನ್ಶನ್ ಕೂಡ ಬರೋದಿಲ್ಲ ಎಂದು ಏಕವಚನದಲ್ಲೇ ಗದರಿಸಿದರು. ಐದು ಬಾರಿ ಮಂತ್ರಿಯಾಗಿರುವ ನನಗೆ ಇದು ಹೊಸ ವಿಚಾರ. ದೇಶದಲ್ಲಿ ಇಲ್ಲದ ಕಾನೂನು ನಿನಗೆಲ್ಲಿಂದ ಬಂತು. ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸು ಎಂದು ತಾಕೀತು ಮಾಡಿದರು.
Back to top button
error: Content is protected !!