ಮಳೆ
ದೊಡ್ಡತ್ತೂರಿನಲ್ಲಿ ಮನೆ ಕುಸಿತ

ಕುಶಾಲನಗರ, ಜು 18: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ
ದೊಡ್ಡತ್ತೂರು ಗ್ರಾಮದಲ್ಲಿ ವಾಸದ ಮನೆ ಕುಸಿದಿದೆ. ಗ್ರಾಮದ ಪಾರ್ವತಿ ಎಂಬವರ ಮನೆ ಮಳೆಗೆ ಕುಸಿದು ಬಿದ್ದಿದೆ. ಸ್ಧಳಕ್ಕೆ ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಕೂಡುಮಂಗಳೂರು ಗ್ರಾಪಂ ಸದಸ್ಯ ದಿನೇಶ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.



