ಕುಶಾಲನಗರ, ಜು 17 ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಶ್ರದ್ದಾಭಕ್ತಿ ಹಾಗೂ ಅದ್ದೂರಿಯಾಗಿ ನೆರವೇರಿದ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷ.
ಚಿಕ್ಕತ್ತೂರಿನ ಗ್ರಾಮದೇವತೆ ಶ್ರೀ ಕನ್ನಿಕಾ ಚೌಡೇಶ್ವರಿ ದೇವಾಲಯದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಕಳಸ ಹೊತ್ತ ಮುತ್ತೈದೆಯರು ಮೆರವಣಿಗೆ ಮೂಲಕ ಸಾಗಿ ಬಂದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯ ಸಹಿತ ಗ್ರಾಮಸ್ಥರು ಮೆರವಣಿಗೆ ಮೂಲಕ ಕೆರೆದಂಡೆಗೆ ಆಗಮಿಸಿದರು.
ಕೂಡಿಗೆಯ ಶ್ರೀ ಸುಬ್ರಹ್ಮಣ್ಯ ದೇವಾಲಯ ಅರ್ಚಕ ನವೀನ್ ಭಟ್ ಕೆರೆಗೆ ಸಾಂಪ್ರದಾಯಿಕ ಪೂಜಾ ವಿಧಿ ನೆರವೇರಿಸಿದರು.
ಬಳಿಕ ತುಂಬಿದ ಆನೆ ಕೆರೆಗೆ ಬಾಗಿನ ಸಮರ್ಪಿಸಲಾಯಿತು. ಕೂಡುಮಂಗಳೂರು ಗ್ರಾಪಂ ವಿವಿಧ ಧರ್ಮೀಯ ಸದಸ್ಯರು ಒಗ್ಗೂಡಿ ಪಾಲ್ಗೊಂಡು ಗ್ರಾಮದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದು ವಿಶೇಷ.
ಗ್ರಾಮದ ನೂರಾರು ಮಂದಿ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಕೆರೆ ಕಟ್ಟೆಯ ಸುತ್ತಲೂ ಪುಷ್ಪಾಲಂಕಾರ ಮಾಡಿ ಅಲಂಕರಿಸಲಾಗಿತ್ತು.
ಗ್ರಾಪಂ ಸದಸ್ಯರು ಆದ ಯುವಕ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಾತನಾಡಿ, 2018 ರಲ್ಲಿ ಕೆರೆ ಭರ್ತಿಯಾದ ಬಳಿಕ ಇದೀಗ ಮತ್ತೆ ಕೆರೆ ತುಂಬಿ ಹರಿದಿದೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಸಮೃದ್ದಿ ಕರುಣಿಸಲು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಯುವಕ ಸಂಘದ ಅಧ್ಯಕ್ಷ ಸುನಿಲ್
ಕಾರ್ಯದರ್ಶಿ ಕೃಷ್ಣಕಾಂತ್,
ಖಜಾಂಚಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ದಿನೇಶ್, ಸದಸ್ಯರಾದ
ಗಣೇಶ್, ಕೃಷ್ಣ, ಶ್ರೀನಿವಾಸ್, ಪಾಪಣ್ಣ, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಪಿಡಿಒ ಸಂತೋಷ್, ಸದಸ್ಯರಾದ ಭಾಗ್ಯರವಿ, ಫಿಲೋಮಿನಾ, ಖತಿಜಾ, ಮಣಿ, ಗಿರೀಶ್, ಚಂದ್ರು ಮೂಡ್ಲಿಗೌಡ, ಪಾರ್ವತಮ್ಮ, ಮಾಜಿ ಉಪಾಧ್ಯಕ್ಷ ಗುಜೇಂದ್ರ, ತಾಪಂ ಮಾಜಿ ಸದಸ್ಯ ಗಣೇಶ್, ಕುಮಾರಸ್ವಾಮಿ, ದೇವಾಲಯ ಸಮಿತಿಯ ಅಧ್ಯಕ್ಷ ಸಿ.ಕೆ.ನಾಗೇಶ್,
ಯುವಕ ಸಂಘದ
ಸದಸ್ಯರಾದ ಶಿವಕುಮಾರ್, ಹೇಮಂತ್ ಕುಮಾರ್, ವಿನು, ಯೋಗೇಶ್, ನಿರ್ಮಲ, ಪುಷ್ಪ ಮತ್ತಿತರರು ಇದ್ದರು.
ನೆರೆದಿದ್ದ ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು.
Back to top button
error: Content is protected !!