ಕುಶಾಲನಗರ, ಆ 23: ಮೃತಪಟ್ಟ ವ್ಯಕ್ತಿಯ ಮೃತದೇಹದ ಅಸ್ಥಿಪಂಜರ ವಾಲ್ನೂರು ಗ್ರಾಮದ ಕಾವೇರಿ ನದಿ ತಟದಲ್ಲಿ ಪತ್ತೆಯಾಗಿದೆ.
ಯುವಕನ ಮೃತದೇಹದಂತೆ ಗೋಚರಿಸುತ್ತಿದ್ದು ಮೃತಪಟ್ಟು ಹಲವು ದಿನಗಳು ಕಳೆದಿದ್ದು ದೇಹದಲ್ಲಿ ಮೂಳೆಗಳು ಹಾಗೂ ಬಟ್ಟೆ ಮಾತ್ರ ಕಂಡುಬಂದಿದೆ. ನದಿ ಉಕ್ಕಿ ಹರಿವ ಸಂದರ್ಭ ಮೃತದೇಹ ಹರಿದು ಬಂದು ಇದೀಗ ತಟದಲ್ಲಿ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದು ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!