ಕ್ರೈಂ

ಅಕ್ರಮ ಜೂಜಾಟ: 7 ಮಂದಿ ಬಂಧನ

ಕುಶಾಲನಗರ, ಆ 18: ಕೊಡಗು ಜಿಲ್ಲಾ ವ್ಯಾಪ್ತಿಯ ಶನಿವಾರಸಂತೆ ಪೊಲೀಸ್ ಠಾಣೆ ಸರಹದ್ದಿನ ತ್ಯಾಗರಾಜ ಕಾಲೋನಿಯ ಯಶಸ್ವಿ ಕಲ್ಯಾಣ ಮಂಟಪದ ಹಿಂಬದಿಯ ಲೈನ್ ಮನೆಯ ಮುಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಜೂಜಾಟ (ಇಸ್ಪಿಟ್) ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿನಾಂಕ: 18-08-2024 ರಂದು ಸಮಯ ಬೆಳಿಗ್ಗೆ 07.00 ಘಂಟೆಯಲ್ಲಿ  ಆ‌ರ್.ವಿ.ಗಂಗಾಧರಪ್ಪ, ಡಿಎಪಿ, ಸೋಮವಾರಪೇಟೆ ಉಪವಿಭಾಗ,  ಪ್ರೀತಂ ಎಸ್. ಪಿ.ಐ. &  ಚಂದ್ರು, ಪಿ.ಎಸ್.ಐ. ಶನಿವಾರಸಂತೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಸದರಿ ಲೈನ್ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ರೂ.17,050/- ರೂ. ಹಣವನ್ನು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು ಕಲಂ: 87 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ;

1. ಶರೀಫ್ ಸಿ.ಎಂ. 44 ವರ್ಷ, ಚಿಕ್ಕಕೊಳತ್ತೂರು ಗ್ರಾಮ, ಶನಿವಾರಸಂತೆ,

2. ರೆಹಮಾನ್, 40 ವರ್ಷ, ಗುಂಡೂರಾವ್ ಬಡಾವಣೆ, ಶನಿವಾರಸಂತೆ.

3. ಶಾಹೀದ್ ಇಸ್ಲಾಂ, 35 ವರ್ಷ, ಶನಿವಾರಸಂತೆ, ಮೂಲತಃ ಅಸ್ಸಾಂ ರಾಜ್ಯ.

4. ಶಫೀಕ್ ಉಲ್, 26 ವರ್ಷ, ತ್ಯಾಗರಾಜ ಕಾಲೋನಿ, ಶನಿವಾರಸಂತೆ, ಮೂಲತ: ಅಸ್ಸಾಂ ರಾಜ್ಯ,

5. ಮುಮ್ರಾಜ್, 46 ವರ್ಷ, ಕಲಲೆ ಗ್ರಾಮ, ಹಾಸನ ಜಿಲ್ಲೆ.

6. ಇರ್ಷಾದ್, 35 ವರ್ಷ, ತ್ಯಾಗರಾಜ ಕಾಲೋನಿ, ಮೂಲತ: ಆಸ್ಸಾಂ ರಾಜ್ಯ.

7. ಶಹಜಹಾನ್, 46 ವರ್ಷ, ತ್ಯಾಗರಾಜ ಕಾಲೋನಿ, ಮೂಲತಃ ಅಸ್ಸಾಂ ರಾಜ್ಯ

ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!