ಕುಶಾಲನಗರ ಆ.1: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶೈಲಾ ಕೃಷ್ಣ ಎಂಬುವರ ಮನೆಯ ಮುಂದೆ ಇರುವ ಕಿರು ಬೆಟ್ಟದ ಬರೆ ಕುಸಿತಗೊಂಡಿರುತ್ತದೆ.
ಗ್ರಾಮ ಪಂಚಾಯತಿ ಸದಸ್ಯೆ ಜಯಶ್ರೀ ಅವರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ ಮೇರೆಗೆ ಮಣ್ಣನ್ನು ತೆರವುಗೊಳಿಸಲಾಯಿತು. ಸ್ಧಳಕ್ಕೆ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನಿತ್, ಸದಸ್ಯೆ ಜಯಶ್ರೀ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸೇರಿದಂತೆ ಸಿಬ್ಬಂದಿ ಲೋಕೇಶ್ ಹಾಜರಿದ್ದು, ಸ್ಧಳ ಪರಿಶೀಲನೆ ನಡೆಸಿದರು.
Back to top button
error: Content is protected !!