ಅಪಘಾತ

ಗೋಣಿಕೊಪ್ಪದಲ್ಲಿ ಕುಸಿದು ಬಿದ್ದ ಅಂಬೂರು ಬಿರಿಯಾನಿ ಸೆಂಟರ್ ಕಟ್ಟಡ

ಕುಶಾಲನಗರ, ಜೂ 20: ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ಇಂದು ದಿಡೀರನ ಕುಸಿದು ಬಿದ್ದಿದೆ. ಹೊಟೇಲ್ ನಲ್ಲಿ ಕಾರ್ಮಿಕರು, ಊಟಕ್ಕೆ ತೆರಳಿದ ಗ್ರಾಹಕರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್ ಮತ್ತೊಂದರಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು. ಇದೀಗ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅಗ್ನಿಶಾಮಕ ದಳ ಆಗಮಿಸಿ, ಸಾರ್ವಜನಿಕರ ಸಹಕಾರದಲ್ಲಿ ಇದೀಗ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಇನ್ನಷ್ಟೇ ಒಳಗೆ ಸಿಲುಕಿಕೊಂಡಿರುವವರ ಮಾಹಿತಿ ಲಭ್ಯವಾಗಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!