ಟ್ರೆಂಡಿಂಗ್

ಮಾದಾಪಟ್ಟಣ ಹೆಡ್ ಕಾನ್ಸ್ ಟೇಬಲ್ ಮನೆಯಲ್ಲಿ ಕಳ್ಳತನ

ಕುಶಾಲನಗರ, ಮೇ 30: ಕುಶಾಲನಗರ ತಾಲೂಕಿನ ‌ಮಾದಾಪಟ್ಟಣ ಗ್ರಾಮದ ನಿವಾಸಿ ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ. ಸುನಿಲ್ ಕುಮಾರ್ ಎಂಬವರ ಮನೆಗೆ ಕನ್ನ ಹಾಕಿದ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹಗಲಿನಲ್ಲಿ ಹಿಂಬಾಗಿಲು ಮುರಿದು ಒಳ್ಳನುಗ್ಗಿದ ಕಳ್ಳರು 15 ಸಾವಿರ ನಗದು, 40 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಸುನಿಲ್ ಮನೆಯ ಹಿಂಬದಿ ವಾಸವಿದ್ದವರ ಮನೆಯಲ್ಲಿ ಕೂಡ ವಿಫಲ‌ಯತ್ನ ನಡೆದಿದೆ. ಸ್ಥಳಕ್ಕೆ ವಿಧಿವಿಜ್ಞಾನ, ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!