ಕುಶಾಲನಗರ, ಮೇ 23: ಕೊಡಗಿನ ವಿಚಿತ್ರ ಆಚರಣೆ ಕುಂಡೆ ಹಬ್ಬದ ಸಂಭ್ರಮದಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ರಮೇಶ (39) ಮೃತ ವ್ಯಕ್ತಿ. ಕುಂಡೆಹಬ್ಬದ ಪ್ರಯುಕ್ತ ವಿರಾಜಪೇಟೆ ಯಲ್ಲಿ ಸಂತೆ ದಿನ ತನ್ನ ಕುಟುಂಬದ ಸದಸ್ಯರ ಜೊತೆಯಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಬೇಡುಹಬ್ಬದ ಹಣದಲ್ಲಿ ಮತ್ತಷ್ಟು ಮದ್ಯ ಸೇವಿಸಿದ್ದಾನೆ.ಸಂಜೆ ವೇಳೆಗೆ ಮಳೆ ಬಂದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಬಿದ್ದು ಮಲಗಿದ್ದು ಬೆಳಗ್ಗೆ ಸಾರ್ವಜನಿಕರು ವಿರಾಜಪೇಟೆ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸರು ವ್ಯಕ್ತಿ ಯನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ವೈದ್ಯರು ಈತ ರಾತ್ರಿಯೇ ಹ್ರದಯಘಾತದಿಂದ ಮ್ರತ ಪಟ್ಟಿದ್ದಾರೆ ಎಂದು ತಿಳಿಸಿದ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದ್ದು ಅಲ್ಲದೆ ಖಾಸಗಿ ಬಸ್ ನಿಲ್ದಾಣ ಕೆಲವು ಅಂಗಡಿಯ ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ಈ ವ್ಯಕ್ತಿ ನ್ರತ್ಯ ಮಾಡುತ್ತಿರುವುದು ಕಂಡು ಬಂದ್ದಿದೆ. ಮೃತ ರಮೇಶ ವಿರಾಜಪೇಟೆ ಹೊರವಲಯದ ಪಾಲಂಗಾಲ ಗ್ರಾಮದ ಕೋಡಿರ ಪ್ರವೀಣ್ ಅವರ ತೋಟದ ಕಾರ್ಮಿಕ ಹಾಗೂ ಅವರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದ ಎನ್ನಲಾಗಿದೆ. ರಮೇಶ ಗೆ ಮೂವರು ಮಕ್ಕಳು ಇದ್ದಾರೆ. ರಮೇಶ ಬಿ ಪಿ ಜಾಸ್ತಿ ಇತ್ತು ಎಂದು ಅವರ ಪುತ್ರಿ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಗ್ಗೆ ರಮೇಶ ಅವರ ಪತ್ನಿ ಭವಾನಿ ಪೊಲೀಸ್ ಠಾಣೆ ಗೆ ಪುಕಾರು ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
Back to top button
error: Content is protected !!