ಕುಶಾಲನಗರ, ಏ 19: ಕುಶಾಲನಗರ ವ್ಯಾಪ್ತಿಯಲ್ಲಿ ಈ ಬಾರಿಯ ಪ್ರಥಮ ಮಳೆ ಶುಕ್ರವಾರ ಸುರಿದಿದೆ. ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ತುಸು ನಿರಾಳ ಉಂಟುಮಾಡಿದೆ.