ಕಾರ್ಯಕ್ರಮ

ಸೇನೆಯಿಂದ ಮನೆಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಮೆರವಣಿಗೆ

ಕುಶಾಲನಗರ, ಫೆ 02 : ಸತತವಾಗಿ 24 ವರ್ಷಗಳ ನಿರಂತರ ಸೇವೆಯೊಂದಿಗೆ ಕರ್ತವ್ಯ ಪೂರ್ಣ ಗೊಳಿಸಿ ತವರೂರಿಗೆ ಮರಳಿದ ಗುಡ್ಡೆಹೊಸೂರು ಬಳಿಯ ಚಿಕ್ಕಬೆಟ್ಟಗೇರಿ ಗ್ರಾಮದ ಬೊಟ್ಟುಮನೆ ಲೋಕೇಶ್ ಕುಮಾರ್ ಅವರನ್ನು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಗುಡ್ಡೆಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಾ.ಶಿವಕುಮಾರ. ಸ್ವಾಮೀಜಿ ವೃತ್ತದಲ್ಲಿ ಭವ್ಯ ಸ್ವಾಗತಗೈದರು.
ನೂರಾರು ಸಂಖ್ಯೆಯಲ್ಲಿ ನೆರೆದ ದೇಶಾಭಿಮಾನಿಗಳು, ಕುಟುಂಬಸ್ಥರು ಪಟಾಕಿ ಹೂಮಾಲೆ ಅರ್ಪಿಸಿ ಅಭಿಮಾನ ಮೆರೆದರು.
ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪುಟ್ಟ ಮಕ್ಕಳು ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಭಾರತಾಂಬೆಗೆ ಘೋಷಣೆ ಕೂಗಿದರು.
ಬಳಿಕ ಅಲಂಕೃತ ತೆರೆದ ವಾಹನದಲ್ಲಿ ನಿವೃತ್ತ ಯೋಧ ಲೋಕೇಶ್ ಅವರನ್ನು ಮೆರವಣಿಗೆ ಮೂಲಕ ಮನೆಗೆ ಕರೆದೊಯ್ದರು.
ಇದಕ್ಕೂ ಮುನ್ನಾ ಗ್ರಾಮಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಯೋಧ ಲೋಕೇಶ್, ಕಳೆದ 24 ವರ್ಷಗಳ ಕಾಲ ದೇಶದ ಹಲವು ಗಡಿಗಳಲ್ಲಿ ಸಾವು ನೋವು ಬದಿಗಿಟ್ಟು ದೇಶಕ್ಕಾಗಿ ಹಗಲಿರುಳು ಕರ್ತವ್ಯ ನಿರ್ವಹಿಸಿದ ನನಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೋರಿದ ಅಭಿಮಾನ ಸಾರ್ಥಕತೆ ತಂದಿದೆ ಎಂದು ಕಂಬನಿಗೈದು ಸಂತಸ ವ್ಯಕ್ತಪಡಿಸಿದರು.
ಯೋಧ ಲೋಕೇಶ್ ಅವರ ಸಹೋದರ ಬೊಟ್ಟು ಮನೆ ಸತ್ಯ ಕುಮಾರ್ ಅವರು, ಸಾರ್ವಜನಿಕರು ಹಾಗೂ ಗ್ರಾಮಸ್ಥರಿಗೆ ಗ್ರಾಮದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಪ್ರಮುಖರಾದ
ಕೆದಂಬಾಡಿ ಅಶೋಕ್, ಕೊಡೇಕಲ್ ಚಿದಾನಂದ, ಗಣೇಶ್, ಕುಯ್ಯುಮುಡಿ ಸುರೇಶ್, ಪೆರುಬಾಯಿ ನವೀನ್, ಮಂದ್ರಿರಾ ದಿಲೀಪ್, ಕುಂಜಿಲನ ಜಗದೀಶ್, ಕಜೆಗದ್ದೆ ಜಗದೀಶ್, ಕೆಮ್ಮಾರನ ನಾಣಯ್ಯ,
ಕುಕ್ಕನೂರು ಚಿದಾನಂದ, ಪೈಕೆರಾ ಕವಿತಾ, ಹುದೇರಿ ರತಿ, ಕೊಡೆಕಲ್ ಬಸಪ್ಪ ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!