ಕಾರ್ಯಕ್ರಮ

ಕುಶಾಲನಗರ ದೇವಾಂಗ ಸಂಘದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ

ಕುಶಾಲನಗರ ಏ 18: ಕುಶಾಲನಗರ ದೇವಾಂಗ ಸಂಘದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ 1045ನೇ ಜಯಂತಿಯನ್ನು ಕುಶಾಲನಗರ ಚೌಡೇಶ್ವರಿ ಅಮ್ಮನ ದೇವಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.

ಆದ್ಯ ವಚನಕಾರ ದೇವರ ದಾಸಿಮಯ್ಯನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ವಿ. ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದೇವರ ದಾಸಿಮಯ್ಯ ನವರ ವಚನಗಳು ಬಸವಣ್ಣನವರಿಗಿಂತಲೂ ಹಿಂದಿನ ಕಾಲದಿಂದಲೂ ರಚನೆಗೊಂಡು ಇಂದಿನವರೆಗೂ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿವೆ. ಇಂತಹ ವಚನಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣ ಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಂಚಾಲಕ ಡಿ.ಎನ್. ಶಶಿ, ಮಹಿಳಾ ಮಂಡಳಿ ಅಧ್ಯಕ್ಷೆ ಪದ್ಮಾ ಮಹೇಶ್, ಶುಭ ರವಿಕುಮಾರ್, ಶೋಭಾ ಅನಿಲ್, ರೂಪ ಕುಮಾರ್, ಗೀತಾ ಸೋಮಶೇಖರ್, ಶುಭ ಸೋಮಶೆಟ್ಟಿ, ಗೌರವಧ್ಯಕ್ಷ ಡಿ.ಟಿ. ವಿಜೇಂದ್ರ ಹಾಗೂ ಸಂಘದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!