ಧಾರ್ಮಿಕ

ಶಿರಂಗಾಲದಲ್ಲಿ ಹೊನ್ನಾರು‌ ಉತ್ಸವ

ಕುಶಾಲನಗರ ಏ 11: ಕುಶಾಲನಗರ ತಾಲ್ಲೂಕಿನ
ಬಯಲು ಸೀಮೆಯ ಶಿರಂಗಾಲ
ಗ್ರಾಮದಲ್ಲಿ ಗ್ರಾಮದ ದೇವಾಲಯ
ಸಮಿತಿ ವತಿಯಿಂದ ಹೊಸ ವರ್ಷ ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಜನಪದ ಸಂಸ್ಕೃತಿಯ ‘ಹೊನ್ನಾರು’ ಉತ್ಸವ( ಚಿನ್ನದ ಉಳುಮೆ)ಕ್ಕೆ ರೈತರು ಸಂಭ್ರಮ, ಸಡಗರದಿಂದ ಚಾಲನೆ ನೀಡಿದರು.
ಗ್ರಾಮದ ಬಸವೇಶ್ವರ
ದೇವಸ್ಥಾನದಲ್ಲಿ ಅಲಂಕೃತ
ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಹೊನ್ನಾರು ಉತ್ಸವಕ್ಕೆ ಚಾಲನೆ ನೀಡಿದ ಮಾತನಾಡಿದ
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಯುಗಾದಿ ಹಬ್ಬವು ರೈತರ ಪಾಲಿಗೆ ಹೊಸ ವರ್ಷವಾಗಿದ್ದು, “ಹೊನ್ನಾರು” ಉಳುಮೆ ಕಾರ್ಯವು
ರೈತರಲ್ಲಿ ಹೊಸ ಉತ್ಸಾಹ ತರಲಿದೆ. ಹೊನ್ನಾರು ಉತ್ಸವದ ಮೂಲಕ ರೈತರ ಕೃಷಿ ಫಸಲಿಗೆ ಉತ್ತಮ ಮಳೆ ಬೆಳೆ ಬಂದು ಕೃಷಿ ಕಾರ್ಯ ದೇಶ ಸಂವೃದ್ದಿಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ನಂತರ ರೈತರು ಗ್ರಾಮದ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ
ಗ್ರಾಮದಲ್ಲಿ ಗ್ರಾಮ ದೇವಾಲಯ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಮೊದಲಿಗೆ ರೈತ ಗಂಗಾರಾಜು
“ಹೊನ್ನಾರು” ನೇಗಿಲು ಹೂಡಿ ಉಳುಮೆ ಕಾರ್ಯ
ಆರಂಭಿಸಿದರು. ಇದೇ ವೇಳೆಯಲ್ಲಿ ಎಲ್ಲಾ ರೈತರು ಸಾಮೂಹಿಕ ಉಳುಮೆ ಆರಂಭಿಸಿದರು.
ನಂತರ ರೈತರು ತಮ್ಮ ತಮ್ಮ ಕೃಷಿ ಜಮೀನಿಇದಳಿ ನೇಗಿಲಿನಿಂದ ಉಳುಮೆ ಆರಂಭಿಸಿ ಸಂತಸಪಟ್ಟರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್
ಮಾತನಾಡಿ, ಹೊನ್ನಾರು ಉತ್ಸವವು
ಗ್ರಾಮದ ರೈತರಲ್ಲಿ ಹೊಸ ಹರ್ಷ ತಂದು ಉತ್ತಮ ಮಳೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ದೇವಾಲಯ ಸಮಿತಿ ಉಪಾಧ್ಯಕ್ಷ ಎಸ್.ಜೆ.ಉಮೇಶ್, ಕಾರ್ಯದರ್ಶಿ ಎಂ.ಎಸ್.ಗಣೇಶ್, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ರವಿ,
ಪ್ರಮುಖರಾದ ಬಿ.ಎಸ್.ಬಸವಣ್ಣಯ್ಯ, ಎಸ್.ಆರ್.ಕಾಳಿಂಗಪ್ಪ, ಎಸ್.ಕೆ.ಪ್ರಸನ್ನ,ಎಸ್.ಎ. ಯೋಗೇಶ್, ಎಸ್.ಪಿ.
ಚೇತನ್, ಮಂಜುನಾಥ್,
ಅರ್ಚಕ ಎಸ್.ಸಿ. ವಸಂತ್,
ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!