ಕ್ರೈಂ

ಬಿಜೆಪಿ ಕಾರ್ಯಕ್ರಮದಲ್ಲಿ ಪಿಕ್ ಪಾಕೆಟ್ ಪ್ರಕರಣ: 13 ಕಳ್ಳರನ್ನು ಬಂಧಿಸಿದ ಕೊಡಗು‌ ಪೊಲೀಸ್

ಕುಶಾಲನಗರ, ಮಡಿಕೇರಿಯಲ್ಲಿ ನಡೆದಿದ್ದ ಪಿಕ್ ಪಾಕೆಟ್

ಕುಶಾಲನಗರ, ಏ 03 : ಕುಶಾಲನಗರ ಬಿಜೆಪಿ ಪಕ್ಷದ ಕಾರ್ಯಕ್ರಮ ಹಾಗೂ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಹಾಲ್‌ನಲ್ಲಿ ಮಾ.27 ಎಂದು ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಕಳ್ಳರು ಕೈಚಳಕ ತೋರಿ ಬಿಜೆಪಿ ಪಕ್ಷದ ವಿವಿಧ ನಾಯಕರ ಜೇಬಿನಲ್ಲಿದ್ದ ರೂ.1.96 ಲಕ್ಷ ದೋಚಿದ್ದ ಸುಮಾರು 13 ಮಂದಿ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜಯಣ್ಣ @ ಜಯ @ ಕಿರಿಕ್ ಜಯ, ಪುಟ್ಟರಾಜು @ ಪುಟ್ಟ, ನಾಗರಾಜ.ಸಿ, @ ಕಿಚ್ಚ @ಕೋತಿ ಕಿಚ್ಚ , ವೆಂಕಟೇಶ್ ಆರ್, ರಾಮು @ ಕುಳ್ಳರಾಮ,ಉಮೇಶ ಕೆ, ಜಯಣ್ಣ ದೊಡ್ಡ ಜಯಣ್ಣ,ಬೋಜಪ್ಪ @ ಬೋಜ, ಮೆಹಬೂಬ್ ಸುಭಾಷ್, ಗಿರೀಶ ಡಿ,ಬಾಲು ಬೆಂಗಳೂರು ಹಬ್ಬಗೋಡಿ ನಿವಾಸಿ ಹರೀಶ, ನೆಲಮಂಗಲದ ರಂಗಣ್ಣ ಬಂಧಿತ ಆರೋಪಿಗಳಾಗೊದ್ದಾರೆ. ಬಂಧಿತರಿಂದ 12 ಮೊಬೈಲ್, 2 ಕಾರು (ಕೆಎ 01 ಬಿ 6936 ಟೊಯೋಟಾ ಇನ್ನೋವಾ ಮತ್ತು ಕೆಎ 51 ಬಿ 5842 ಟೊಯೋಟಾ ಇಟಿಯೋಸ್), ರೂ.2 . 65,960 ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ಮಾ.27 ರಂದು ಕುಶಾಲನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ: ನಡೆಯುವ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದ ಕುಶಾಲನಗರ ಇಂದಿರಾ ಬಡವಾಣೆ ನಿವಾಸಿ ಎಂ.ಎಂ ಚರಣ್, ರವರು ಜೇಬಿನಲ್ಲಿದ್ದ ರೂ. 32,000, ಡಿ.ಹೆಚ್. ಚಂದ್ರಶೇಖರ್ ರವರ ಜೇಬಿನಿಂದ ರೂ. 50.000, ಮಣಿ.ಹೆಚ್ ರವರ ಜೇಬಿನಿಂದ ರೂ. 15,000 ಹಾಗೂ ಆದೇ ದಿನ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಹಾಲ್‌ನಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಂಗಸಮುದ್ರ ನಿವಾಸಿ ನಿತಿನ್ ಹೆಚ್.ಎಸ್ ರವರ ಜೇಬಿನಿಂದ 50,000 ಮತ್ತು ವಿರಾಜಪೇಟೆ ನಿವಾಸಿ ಶ್ರೀ ಯೋಗೇಶ್ ರವರ ಜೇಬಿನಿಂದ ರೂ. 32,300 ಹಾಗೂ ಮಾಜಿ ಸ್ಪೀಕರ್ ಶ್ರೀ ಕೆ.ಜಿ. ಬೋಪಯ್ಯ ರವರ ಜೇಬಿನಿಂದ ರೂ 17,000 ಜನಸಂದಣಿಯಲ್ಲಿ ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿದ್ದರು. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ಒಟ್ಟು ಮೊತ್ತ ರೂ. 1,96,300 ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಐಪಿಎಸ್ ಗಳಾದ ಬಿ.ಜಿ. ಪ್ರಕಾಶ್, ಬಿ.ಎಸ್. ಉಮಾ ಕುಶಾಲನಗರ ನಗರ ಪೊಲೀಸ್ ಠಾಣೆ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಏ.2 ರಂದು ಭದ್ರಾವತಿ, ಬೆಂಗಳೂರರಿನ ಒಟ್ಟು 13 ಮಂದಿಯನ್ನು ಬಂದಿಸಿ ನ್ಯಾಯಾಲಯಕ್ಕೆ‌ ಹಾಜರುಪಡಿಸಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೊಡಗು ಜಿಲ್ಲೆ ಮಡಿಕೇರಿ,ಪೊಲೀಸ್ ಅಧೀಕ್ಷಕರು ಕೆ.. ರಾಮರಾಜನ್ ರವರು ಶ್ಲಾಘಿಸಿರುತ್ತಾರೆ.

ವಿಶೇಷ ಸೂಚನೆ:- ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸುವ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಸೇರುವ ಜನರ ಮಧ್ಯ ಸೇರಿಕೊಂಡು ನಗದು, ಮೋಬೈಲ್, ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಅಪರ ಜನಸಂದಣಿಯಾಗು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ ಹಾಗೂ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!