ಮನವಿ

ಕುಶಾಲನಗರ ಒಕ್ಕಲಿಗ ಸಮುದಾಯಕ್ಕೆ ಸ್ಮಶಾನಕ್ಕೆ‌ ಜಾಗ ಒದಗಿಸಲು‌ ಮನವಿ

ಕುಶಾಲನಗರ, ಫೆ 23: ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ಬಳಿ ಸ್ಮಶಾನಕ್ಕೆಂದು‌ ಮೀಸಲಿರುವ 2.80 ಎಕರೆ ಜಾಗದಲ್ಲಿ ಒಕ್ಕಲಿಗ ಸಮುದಾಯದ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಒದಗಿಸುವಂತೆ ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಪ್ರಮುಖರು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕಲಿಗರ ಸಂಘದ ಪ್ರಮುಖರಾದ ವಿ.ಜೆ.ನವೀನ್ ಹಾಗೂ ಜಿ.ಬಿ.ಜಗದೀಶ್, ಕುಶಾಲನಗರ, ಮುಳ್ಳುಸೋಗೆ ವ್ಯಾಪ್ತಿ ಒಳಗೊಂಡಂತೆ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಳೆ‌ ಮಾರುಕಟ್ಟೆ ಬಳಿ ಇತರೆ ಎರಡು‌ ಜನಾಂಗಕ್ಕೆ ಪ್ರತ್ಯೇಕವಾಗಿ ಸ್ಮಶಾನ ಒದಗಿಸಿರುವಂತೆ ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕ ರುದ್ರಭೂಮಿಗೆ ಸ್ಥಳ‌ ನೀಡಿ ಜಾಗದ ಮಾಲೀಕ್ವತದ ದಾಖಲೆ ನಿರ್ಮಿಸಿಕೊಡಬೇಕಿದೆ ಎಂದು ಆಗ್ರಹಿಸಿ‌ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಪ್ರಮುಖರಾದ ಎಂ.ಎಚ್.ಕಿರಣ್, ಸ್ವರೂಪ್, ಶಿವಪ್ರಸಾದ್, ಶೇಖರೇಗೌಡ, ಆನಂದ, ಅನಿಲ್, ದಿನೇಶ್, ಪ್ರವೀಣ್, ದಯಾ, ವಿ.ಪಿ.ಸುಖೇಶ್  ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!