ಕುಶಾಲನಗರ, ಫೆ. 2: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ಸೇರಿದಂತೆ ಸಂಘದ ಈಗಿನ ಕಟ್ಟಡಕ್ಕೆ 45 ವರ್ಷ ಸಂದಿದ್ದು, ಶೀಥಿಲವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಹೊಸ ಯೋಜನೆಯ ಬಗ್ಗೆ ಹಾಗೂ
ಸಂಘದ ಸದಸ್ಯರಿಗೆ ಸರಕಾರದ ಹೊಸ ಯೋಜನೆಯ ಅಡಿಯಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಜಿ. ಹನಿಕುಮಾರ್, ಉಪಾಧ್ಯಕ್ಷ ಮನು ಸೇರಿದಂತೆ ನಿರ್ದೇಶಕರು ಹಾಜರಿದ್ದರು.
Back to top button
error: Content is protected !!