ಕಾರ್ಯಕ್ರಮ

ಸಂಘಟನೆ ಬಗ್ಗೆ ಅವಹೇಳನ ಸಲ್ಲದು: ಕನ್ನಡ ಯಾರ ಸ್ವತ್ತು ಅಲ್ಲ, ಎಲ್ಲರಿಗೂ ಹಕ್ಕಿದೆ: ದಿನೇಶ್ ಶೆಟ್ಟಿ ಆಕ್ರೋಷ

ಕುಶಾಲನಗರ, ನ 05: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಕೊಡಗು ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಸಮಾರಂಭ ಉದ್ಘಾಟಿಸಿದರು. ನೂತನ ಸಮಿತಿಗಳಿಗೆ ನಿಯೋಜಿಸಿದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು.

ಈ ಸಂದರ್ಭ ಮಾತನಾಡಿದ
ಕರವೇ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಮಾತನಾಡಿ,
ಸಂಘಟನೆಗಳ ಬಗ್ಗೆ ಕೆಲವರು ತುಚ್ಚವಾಗಿ ಮಾತನಾಡುತ್ತಿದ್ದು ಅಪಮಾನ ಮಾಡುವ ಕ್ರಮ ಸರಿಯಲ್ಲ. ಕನ್ನಡ ಭಾಷೆ ಯಾರೊಬ್ಬರ ಸ್ವತ್ತು ಅಲ್ಲ. ಕನ್ನಡ ಭಾಷೆ ಉಳಿವಿಗೆ ಯಾರು ಬೇಕಾದರೂ ಹೋರಾಡಬಹುದಾಗಿದೆ.
ನಮ್ಮದೂ ಕೂಡ ಸಕ್ರಮ ಸಂಘಟನೆಯಾಗಿದೆ. ನಾಡು ನುಡಿ ನೆಲ‌ ಜಲ ಪರವಾಗಿ ಸದಾ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ವೇದಿಕೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಸಂತೋಷ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ವಿರಾಜಪೇಟೆ ತಾಲೂಕು ಅಧ್ಯಕ್ಷ ಅನಿಲ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!