ಕ್ರೀಡೆ

ಐಪಿಎಲ್ ಮಾದರಿಯ ಸಹಾರ ಕಪ್ ಮೂರನೇ ವರ್ಷದ ಅದ್ದೂರಿ ಕ್ರಿಕೆಟ್ ಮಹೋತ್ಸವಕ್ಕೆ ಚಾಲನೆ

ಕುಶಾಲನಗರ, ಮಾ. 30: ಐಪಿಎಲ್ ಮಾದರಿಯ ಸಹಾರ ಕಪ್
ಮೂರನೇ ವರ್ಷದ ಅದ್ದೂರಿ ಕ್ರಿಕೆಟ್ ಮಹೋತ್ಸವಕ್ಕೆ ಭರ್ಜರಿ ಚಾಲನೆ ನೀಡಲಾಯಿತು. ಪ್ರತಿಷ್ಠಿತ ರೆಸಾರ್ಟ್ ಅಲ್ಲಿ ನಡೆದ ಐಪಿಎಲ್ ಮಾದರಿ ತಂಡವನ್ನು ಖರೀದಿ ಮಾಡುವುದರ ಮೂಲಕ ಸಹಾರ ಕಪ್ ಗೆ ಚಾಲನೆ ನೀಡಲಾಯಿತು ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಗ್ರೆಸ್ ಯುವ ಮುಖಂಡ ಮೈಸಿ ಕತ್ತಣ್ಣೀರ ಮಾತನಾಡಿ, ಸತತ ಎರಡು ವರ್ಷವೂ ಐಪಿಎಲ್ ಮಾದರಿ ನಡೆದ ಕ್ರಿಕೆಟ್ ಪಂದ್ಯಾವಳಿಯು ಬಹಳಷ್ಟು ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಕೂಡ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಸಹಾರ ಕಪ್ ವಿಶೇಷವಾಗಿ ನಡೆಯಲಿದ್ದು ಪ್ರತಿ ತಂಡದಲ್ಲೂ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಆಟಗಾರರನ್ನು ಪರಿಚಯಿಸಲಿದೆ ಎಂದು ತಿಳಿಸಿದರು. ಸಹಾರ ಕಪ್ ಪ್ರಥಮ ಬಹುಮಾನದ ದಾನಿಗಳಾದ ಜಾವಿದ್ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು ಇದೇ ಸಂದರ್ಭ ಸಹಾರ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಜೀ ಭರತ್.ಲ, ಕೆ.ಜಿ ಎಸ್ ಸುಮೇರ್, ಬಿಲಾಲ್, ರಕ್ಷಿತ್ ಮಾವಜಿ, ಕಬೀರ್ ಹಾಜರಿದ್ದರು. ಆರ್‌ಸಿಬಿ ತಂಡ ಬಹಳಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಆಗಿದ್ದು ವಿಶೇಷವಾಗಿತ್ತು ಮುಂಬೈ ತಂಡವು ಕೂಡ ಬಿಡ್ ನ ಮೂಲಕ ಖರೀದಿಯಾಯಿತು. ಉಳಿದ ಎಲ್ಲಾ ತಂಡವನ್ನು ಪ್ರಾಂಚೈಸಿಗಳು ಸಮಬಲವಾಗಿ ಖರೀದಿ ಮಾಡಿಕೊಂಡರು.

Related Articles

Leave a Reply

Your email address will not be published. Required fields are marked *

Back to top button
error: Content is protected !!