ಕಾರ್ಯಕ್ರಮ

ಬಿ.ಜೆ.ಪಿ.ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಕೊಡಗಿನಿಂದ 500 ಮಂದಿ

ಕುಶಾಲನಗರ, ನ 18: ದಿನಾಂಕ 20/11/2022 ರ ಭಾನುವಾರ ಬಳ್ಳಾರಿಯಲ್ಲಿ ನಡೆಯಲಿರುವ ಬಿ.ಜೆ.ಪಿ.ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 500 ಮುಖಂಡರು 8 ಬಸ್ಸುಗಳಲ್ಲಿ ತೆರಳಲಿದ್ದಾರೆ.

ಸರ್ಕಾರ ಈ ಹಿಂದೆ ಎಸ್‌.ಟಿ. ಕಮ್ಯುನಿಟಿಗೆ 4% ಮೀಸಲಾತಿ ಹೆಚ್ಚಿಸಿರುವುದು ಸಮುದಾಯಕ್ಕೆ ಖುಷಿ ತಂದಿರುವುದು ಮತ್ತು ಈ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್‌ರವರು ಪರಿಶಿಷ್ಟ ಪಂಗಡಗಳಿಗೆ ಹಲವೊಂದು ಯೋಜನೆಯನ್ನು ರೂಪಿಸಿದ್ದು, ಅದರಂತೆ ಪರಿಶಿಷ್ಟ ಪಂಗಡದ ಜೇನುಕುರುಬ, ಎರವ, ಸೋಲಿಗ, ಕುರುಬ ಮರಾಠಿ ಮತ್ತು ಹಲವೊಂದು ಪಂಗಡದ ಮುಖಂಡರುಗಳು ಮತ್ತು ಜನಪ್ರತಿನಿಧಿಗಳು ಆಗಮಿಸಿ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಡಿ.ಆರ್.ಪ್ರಭಾಕರ್, ರಾಜ್ಯ ಸಮಿತಿ ಸದಸ್ಯ ಬಿ.ಕೆ
ಮೋಹನ್, ತಾಲೂಕು ಅಧ್ಯಕ್ಷ ರವಿ ಮತ್ತಿತರರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!