ಕಾರ್ಯಕ್ರಮ

ಕೂಡುಮಂಗಳೂರು ಗ್ರಾಪಂ: ಶೇಕಡ 25% ಅನುದಾನದಡಿ ಹೊಲಿಗೆ ಯಂತ್ರ ವಿತರಣೆ

ಕುಶಾಲನಗರ, ಡಿ 30: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಶೇಕಡ 25% ಅನುದಾನದ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೊದಲನೇ ಹಂತದ 13 ಮಂದಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಪಂಚಾಯಿತಿ ಸಭಾಂಗಣದಲ್ಲಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಫಿಲೋಮಿನಾ, ಪಾರ್ವತಮ್ಮ, ಗೌರಮ್ಮ, ಈರಯ್ಯ ಮತ್ತು ಪಂಚಾಯಿತಿ ನೌಕರರಾದ ಅವಿನಾಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!