ಕುಶಾಲನಗರ, ಡಿ 22: ಕುಟುಂಬ ಸದಸ್ಯರ ವರ್ತನೆಯಿಂದ ವ್ಯಕ್ತಿಯೊಬ್ಬರು ಮನನೊಂದು ನೇಣಿಗೆ ಶರಣಾದ ಘಟನೆ ಬೈಲುಕೊಪ್ಪೆಯಲ್ಲಿ ನಡೆದಿದೆ.
ಮೂಲತಃ ಸೋಮವಾರಪೇಟೆ ಕಿರಗಂದೂರು ನಿವಾಸಿ ಬಿ.ಕೆ.ಗಣಪತಿ ಮೃತ ವ್ಯಕ್ತಿ. ಬೈಲುಕೊಪ್ಪೆ ತಿರುಮಲಾಪುರದ ಸಂಬಂಧಿಕರ ಮನೆಯಲ್ಲಿ ಮರಕ್ಕೆ ನೇಣು ಬಿಗಿದು ಗಣಪತಿ ಮೃತಪಟ್ಟಿದ್ದಾರೆ.
ನನ್ನನ್ನು ಮನೆಯಿಂದ ಹೊರಹಾಕಿದ ಹಿನ್ನಲೆಯಲ್ಲಿ ಮನನೊಂದು ಸಾವಿಗೆ ಶರಣಾಗುತ್ತಿರುವುದಾಗಿ ಪತ್ನಿ ಮತ್ತು ಮಕ್ಕಳ ಹೆಸರು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮೃತರ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ. ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!