ಆರೋಪ

ನಕಲಿ ಐಟಿ ಅಧಿಕಾರಿಗಳಿಗೆ ಜಾಮೀನು: ಪೊಲೀಸರ ಕಾರ್ಯವೈಖರಿಗೆ ಗೌಡ ಸಮಾಜ ಅಸಮಾಧಾನ

ಪ್ರಕರಣವನ್ನು ವ್ಯವಸ್ಥಿತವಾಗಿ‌ ಮುಚ್ಚಿ ಹಾಕುವ ಹುನ್ನಾರ: ಆರೋಪ

ಕುಶಾಲನಗರ, ನ‌ 24:‌ ಕುಶಾಲನಗರದ ದಂತ ವೈದ್ಯ ದೇವರಗುಂಡ ಪ್ರವೀಣ್ ಅವರ ಮನೆಗೆ‌ ಐಟಿ ಅಧಿಕಾರಿಗಳ ಹೆಸರಿನಲ್ಲಿ‌ ಅತಿಕ್ರಮ ಪ್ರವೇಶ ಮಾಡಿದ ಆರೋಪಿಗಳ ವಿರುದ್ದ ಪೊಲೀಸರು ಸೂಕ್ತ ಕ್ರಮ‌ಕೈಗೊಳ್ಳಬೇಕಿದೆ. ಯಾವುದೇ ರಾಜಕೀಯ ಒತ್ತಡಕ್ಕೆ‌ ಮಣಿಯದೆ ಕಠಿಣ‌ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಗೌಡ ಸಮಾಜದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದರು.

ರಾಜಕೀಯ ಪ್ರೇರಿತರಾಗಿ ಆರೋಪಿಗಳ ವಿರುದ್ದ ದುರ್ಬಲ ಸೆಕ್ಷನ್ ಗಳನ್ನು ಹಾಕಿ ಜಾಮೀನು ದೊರೆಯುವಂತೆ ಮಾಡಲಾಗಿದೆ‌. ಸೂಕ್ತ ತನಿಖೆ ನಡೆಸದೆ, ಆರೋಪಿಗಳ ಉದ್ದೇಶದ ಬಗ್ಗೆ ತನಿಖೆ ನಡೆಸದೆ, ಸಂತ್ರಸ್ಥ ವೈದ್ಯರು ಆರೋಪಿಗಳನ್ನು ಗುರುತು ಪತ್ತೆ ಮಾಡುವ ಪ್ರಕ್ರಿಯೆ ಕೂಡ ಮಾಡಿಲ್ಲ. ಇದೆಲ್ಲ ನೋಡುವಾಗ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!