ಕುಶಾಲನಗರ ನ 1: 1905ರಲ್ಲಿ ಆಲೂರು ವೆಂಕಟರಾವ್ ಅವರಿಂದ ಆರಂಭವಾದ ಕರ್ನಾಟಕ ಚಳುವಳಿಯು ಸತತವಾಗಿ 14 ವರ್ಷ ನಡೆದ ಫಲವಾಗಿ ಇಂದು ನಮ್ಮ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಸಂದಿವೆ ಎಂದು ಹೆಬ್ಬಾಲೆ ಸರಕಾರಿ ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ
ಎಚ್.ಎಮ್. ಹೇಳಿದರು.
ಕುಶಾಲನಗರ ತಾಲೂಕು ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭುವನೇಶ್ವರಿ ಮಾತೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರದೀಪ್, ಶಾಲಾ ಶಿಕ್ಷಕ ವರ್ಗದವರಾದ ಹೆಚ್.ಈ. ರಮೇಶ್, ಸಿ.ಎಸ್. ಜಾನಕಿ, ಸಿ.ಎಂ. ಬಬಿತ ಹೆಚ್.ಬಿ. ಪುಷ್ಪಾವತಿ, ಭಾಗ್ಯ, ಉದ್ಯಮಿ ಧನರಾಜ್, ಅಪ್ಪು ಅಭಿಮಾನಿಗಳ ಸಂಘದ ಪದಾಧಿಕಾರಿ ಅಭಿಷೇಕ್, ಅಡುಗೆಯವರಾದ ವಿನೀತ, ಮಂಜುಳಾಮತ್ತು ಶಾಲಾ ಮಕ್ಕಳು ಹಾಜರಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Back to top button
error: Content is protected !!