ಚುನಾವಣೆ

ಮುಂಜಾನೆ 4 ಗಂಟೆವರೆಗೆ ನಡೆದ ಮರುಎಣಿಕೆ: 1 ಮತದಿಂದ ಅರುಣ್ ಕುಮಾರ್ ಗೆಲುವು

ಗೊಂದಲದ ವಾತಾವರಣ: ಚುನಾವಣಾ ಅಧಿಕಾರಿಗಳ ನಡೆಗೆ ಅಸಮಾಧಾನ

ಕುಶಾಲನಗರ, ಅ 13: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮುಂದಿನ 5 ವರ್ಷಗಳ‌ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು.

ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾನ‌ ನಂತರ ಮತ ಎಣಿಕೆ ಕಾರ್ಯ ತಡರಾತ್ರಿ 9 ಗಂಟೆ ತನಕ ನಡೆಯಿತು.

ಈ ಪೈಕಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಟಿ.ಅರುಣ್ ಕುಮಾರ್ (736) ಸಣ್ಣಪ್ಪ (731) ಅವರ ವಿರುದ್ದ 5 ಮತಗಳ ಅಂತರಿಂದ ಗೆಲುವು ಸಾಧಿಸಿದರು. ಈ ಸಂದರ್ಭದಲ್ಲಿ ಉಂಟಾದ ಗೊಂದಲದಿಂದ ಮರು ಎಣಿಕೆ‌ ಕಾರ್ಯ ಡ್ರಾ ದಲ್ಲಿ ಅಂತ್ಯಗೊಂಡು ಮತ್ತೊಮ್ಮೆ ಮರುಎಣಿಕೆ ನಡೆಯಿತು. ಮುಂಜಾನೆ 4 ಗಂಟೆವರೆಗೆ ನಡೆದ ಮರುಎಣಿಕೆಯಲ್ಲಿ ಅರುಣ್ ಕುಮಾರ್ 1 ಮತಗಳಿಂದ ಗೆಲುವು ಸಾಧಿಸಿರುವ ಬಗ್ಗೆ ಅಧಿಕಾರಿಗಳು ಘೋಷಿಸಿದರು.

ಈ ಘಟನೆ ಸಧ್ಯ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೂರು‌ ಬಾರಿ ವಿಭಿನ್ನ ಫಲಿತಾಂಶ ಘೋಷಿಸಿದ ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!