ಕಾರ್ಯಕ್ರಮ

ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದಿಂದ ಶ್ರೀ ವಿಶ್ವಕರ್ಮ ಪೂಜಾ‌ ಮಹೋತ್ಸವ, ಕುಂಕುಮಾರ್ಚನೆ ಮತ್ತು ವಾರ್ಷಿಕ ಮಹಾಸಭೆ

ಕುಶಾಲನಗರ, ಅ 08: ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ 20ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ‌ ಮಹೋತ್ಸವ, ಕುಂಕುಮಾರ್ಚನೆ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮ ನಡೆಯಿತು.

ಗಾಯತ್ರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಡಾ.ಮಂಥರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜಕ್ಕೆ ಸಮುದಾಯ ಭವನ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ, ನಿಗಮದ ಸೌಲಭ್ಯಗಳನ್ನು ತಲುಪಿಸಲು ಕ್ರಮವಹಿಸಲಾಗುವುದು. ಒಳ್ಳೆಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಅರಕಲಗೂಡು ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾತ್ಕಾಲಿಕವಾಗಿ ಇರುವ ಕಟ್ಟಡವನ್ನು ಸಮಾಜಕ್ಕೆ ಶಾಶ್ವತವಾಗಿ ಒದಗಿಸಲು ಶಾಸಕರು ಪ್ರಯತ್ನಿಸಬೇಕಿದೆ. ರಾಜ್ಯಾದ್ಯಂತ ವಿಶ್ವಕರ್ಮ ಮಹೋತ್ಸವ, ಸಮಾವೇಶಕ್ಕೆ ಕೊಡಗಿನಿಂದ ಚಾಲನೆ ನೀಡಲಾಗಿತ್ತು.

ವಿಶ್ವ ಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ, ವಿಶ್ವಕರ್ಮ ಮಹೋತ್ಸವ ಸರಕಾರದಿಂದ ಆಚರಣೆಗೆ ಸಂಘಟನೆಯ ಪ್ರಮುಖ ಕಾರಣ ಎಂದರು. ಕೋವಿಡ್ ನಿಂದ ಕೆಲವರ್ಷ ಸ್ಥಗಿತವಾಗಿದ್ದ ಆಚರಣೆ ಇಂದು ವಿಜೃಂಭಣೆಯಿಂದ ಜರುಗಿರುವುದು ಹರ್ಷದ ವಿಚಾರ ಎಂದರು.

ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ.ಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಭಾಂಗಣದಲ್ಲಿ ಗಣಪತಿ ಹೋಮ, ವಿಶ್ವಕರ್ಮ‌ ಪೂಜೆ, ಪೂರ್ಣಾಹುತಿ ನಡೆಯಿತು. ಕಾವೇರಿ‌ ನದಿಯಿಂದ ಪೂರ್ಣ ಕುಂಭ ಕಳಸದೊಂದಿಗೆ ತೆರೆದ ಅಲಂಕೃತ ರಥದಲ್ಲಿ ವಿಶ್ವಕರ್ಮ‌ಮೂರ್ತಿ ಹಾಗೂ ಶಿವಸುಜ್ಞಾನ ತೀರ್ಥ ಸ್ವಾಮಿಗಳ ಭವ್ಯ‌ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಆದ್ಯಕ್ಷ ಎಸ್.ಜೆ.ದೇವದಾಸ್, ಮೈಸೂರಿನ ಉದ್ಯಮಿ ಆರ್.ಎನ್. ಜಯತೀರ್ಥ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಮಹೇಶ್ ಆಚಾರ್ಯ, ಕುಶಾಲನಗರ ತಾಲೂಕು ಗೌರವಾಧ್ಯಕ್ಷ ಎಚ್.ವಿ.ರಾಜಾಚಾರ್, ವಿಶ್ವಕರ್ಮ ಮಹಾಮಂಡಲ‌ ಮಾಜಿ ನಿರ್ದೇಶಕ ವಿ.ಕುಮಾರ್, ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕಾರ್ಯದರ್ಶಿ ವಿ.ಕೃಷ್ಣ, ದೊಡ್ಡಹರವೆ ಕಾಳಿಕಾಂಬ ದೇವಾಲಯ ಅಧ್ಯಕ್ಷ ಜಗದೀಶ್, ಕುಶಾಲನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಲಿತ ವರದರಾಜು, ಕೊಡಗು ಸಮಾಜ‌ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ಶಿರಂಗಾಲ ಸಮಿತಿ ಅಧ್ಯಕ್ಷ ಎಸ್.ಎಂ.ಶ್ಯಾಮಸುಂದರ್, ಕುಶಾಲನಗರ ತಾಲೂಕು ಸಂಘದ ಪ್ರಮುಖರಾದ ನಾಗಣ್ಣಾಚಾರ್, ಕೆ.ಬಿ.ಮೋಹನ್, ಎಚ್.ಎನ್.ದಕ್ಷಿಣಾಮೂರ್ತಿ ಸೇರಿದಂತೆ ನಿರ್ದೇಶಕರು, ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಮಂಗಳಾ ಪ್ರಕಾಶ್, ಶಶಿಕಲಾ ಕೃಷ್ಣಾಚಾರ್, ರತ್ನಮ್ಮ ಪುಟ್ಟಣ್ಣಾಚಾರ್, ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್, ಸಮಾಜ‌ಕಲ್ಯಾಣ ಇಲಾಖೆ ಅಧಿಕಾರಿ ಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!