ಸಭೆ

ಕುಶಾಲನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಾಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ

ಕುಶಾಲನಗರ, ನ 28: ಕುಶಾಲನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಾಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ವಿ ಪಿ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಬಗ್ಗೆ ಜವಾಬ್ದಾರಿ ಪಡೆದು ರಸೀದಿ ಪುಸ್ತಕ ಪಡೆದಿರುವವರು ಆದಷ್ಟು ಬೇಗ ತಮ್ಮ ಪಾಲಿನ ಅಭಿಯಾನ ಕಾರ್ಯಕ್ರಮವನ್ನು ಚುರುಕುಗೊಳಿಸುವಂತೆ ಅಧ್ಯಕ್ಷರು ಸೂಚಿಸಿದರು,
ಈಗಾಗಲೆ ಶಾಸಕರಾದ ಮಂತರ್ ಗೌಡ ರೊಂದಿಗೆ ಸಚಿವ ದಿನೇಶ್ ಗುಂಡೂರಾವ್ ರವರು ಉದ್ದೇಶಿತ ಕಟ್ಟಡದ ಬಗ್ಗೆ ಚರ್ಚಿಸಿ ಅದಷ್ಟು ಬೇಗ ಕೆಲಸ ಕಾರ್ಯಗಳನ್ನು ಚುರುಕು ಗೊಳಿಸಿ ಎಂದಿದ್ದಾರೆ,ಹಿರಿಯ ವಿದ್ಯಾರ್ಥಿಗಳೆಲ್ಲರೂ ತುಂಬು ಹೃದಯದಿಂದ ಸಹಕರಿಸಬೇಕೆಂದು ವಿ ಪಿ ಶಶಿಧರ್ ಹೇಳಿದರು, ಸದಸ್ಯ‌ ಅಭಿಯಾನಕ್ಕೆ ಹೆಚ್ಚಿನ ಆಧ್ಯತೆ ನೀಡಿ ಅಂತರ್ ಜಾಲದ ಮುಖಾಂತರ ಸದಸ್ಯ ಅಭಿಯಾನ ಯ್ಯಾಪ್ ತಯಾರು ಮಾಡಲು ಚರ್ಚಿಸಲಾಯಿತು, ಸರ್ಕಾರದ ಅನುದಾನ ವಲ್ಲದೆ ಇತರ ಸಂಪನ್ಮೂಲ ಕೂಡಿಕರಣದ ಬಗ್ಗೆ ಚರ್ಚಿಸಲಾಯಿತು,ಕೆಲಸ ಕಾರ್ಯಗಳಿಗೆ ಪ್ರತ್ಯೇಕ ಕಚೇರಿ ಬಗ್ಗೆ ಚರ್ಚಿಸಲಾಯಿತು,
ಕಾರ್ಯದರ್ಶಿ ಎಂ ಈ ಮೋಯ್ದೀನ್ ಸ್ವಾಗತಿಸಿ ಹಿಂದಿನ ವರದಿ ಓದಿದರು,ಸದಸ್ಯರಾದ ಎಂ ವಿ ನಾರಾಯಣ,ವಿ ಎಸ್ ಆನಂದ, ಪುಂಡರೀಕಾಕ್ಷ,ಜಯವರ್ಧನ್,ಲೋಕೇಶ್ ಸಾಗರ್,ರವಿಕುಮಾರ್,ಚಂದನ್ ಕುಮಾರ್,ಹಾಜರಿದ್ದರು,
ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಮತ್ತೋಮ್ಮೆ ಸರ್ಕಾರದ ಗಮನಹರಿಸಲು ನಿಯೋಗ ತೆರಳುವಂತೆ ಚರ್ಚಿಸಲಾಯಿತು,

Related Articles

Leave a Reply

Your email address will not be published. Required fields are marked *

Back to top button
error: Content is protected !!