ಕ್ರೀಡೆ

ವಿಪತ್ತು ಎದುರಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ:ಡಿವೈಎಸ್ಪಿ ಗಂಗಾಧರಪ್ಪ

ಕುಶಾಲನಗರ, ಜೂ 14: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡ ಆಶ್ರಯದಲ್ಲಿ ಕೂಡಿಗೆಯಲ್ಲಿ ಸೌಹಾರ್ದ ಪಂದ್ಯಾಟ ಹಮ್ಮಿಕೊಳ್ಳಲಾಯಿತು.

ಪೊಲೀಸ್ ಇಲಾಖೆ, ಪತ್ರಕರ್ತರು ಹಾಗೂ ಸ್ಥಳೀಯ ಆಟಗಾರರ ತಂಡದ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾಟ ನಡೆಯಿತು.

ಈ‌ ಬಗ್ಗೆ ಮಾತನಾಡಿದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವಿಪತ್ತು‌ ನಿರ್ವಹಣೆ ಹಿನ್ನಲೆಯಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯ. ಇಲಾಖೆಗಳೊಂದಿಗೆ ಸ್ಥಳೀಯ ಸಂಘಟನೆಗಳು, ಯುವಪಡೆ ಕೈಜೋಡಿಸಬೇಕೆನ್ನುವ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸಲು ಇಂತಹ ಸೌಹಾರ್ದ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಪಂದ್ಯಾಟಗಳನ್ನು ಹಮ್ಮಿಕೊಂಡು‌ ವಿಪತ್ತು ನಿರ್ವಹಣೆಗೆ ಇತರರ ಸಹಭಾಗಿತ್ವ ಮುಖ್ಯ ಎಂಬುದನ್ನು ಮನದಟ್ಟು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ವೃತ್ತ‌ ನಿರೀಕ್ಷಕ ಮಹೇಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಕುಶಾಲನಗರ, ಸುಂಟಿಕೊಪ್ಪ ಠಾಣೆಯ ಅಧಿಕಾರಿ ಸಿಬ್ಬಂದಿಗಳು, ಸ್ಥಳೀಯ ಯುವಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!