ಕುಶಾಲನಗರ ಮಾ.10:ಕೊಡಗು ಜಿಲ್ಲೆಯ ಸರ್ಕಾರಿ ವಾಹನಗಳ ಕೊಡಗು ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಆಂಬ್ಯುಲೆನ್ಸ್ ಚಾಲಕ ಡಿ.ವಿ.ರಮೇಶ್ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಪಿಎಂ.ಬಾಬು ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಡಿ.ವಿ.ರಮೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಚಿಣ್ಣಪ್ಪ ಅವರು ಕಾರ್ಯಾಧ್ಯಕ್ಷರಾಗಿ, ಸಾರಿಗೆ ಇಲಾಖೆಯ ವಿನ್ಸೆಂಟ್ ಉಪಾಧ್ಯಕ್ಷರಾಗಿ, ಪಶು ಸಂಗೋಪನಾ ಇಲಾಖೆಯ ಸಂಜೀವ್ ಕಾರ್ಯದರ್ಶಿಯಾಗಿ, ಜಿಲ್ಲಾ ತರಬೇತಿ ಕೇಂದ್ರದ ಸೋಮು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇವರುಗಳ ಜೊತೆಗೆ ವಿವಿಧ ಇಲಾಖೆಯ ವಾಹನ ಚಾಲಕರು ನಿರ್ದೇಶಕರಾಗಿ ನೇಮಕವಾಗಿದ್ದಾರೆ.
Back to top button
error: Content is protected !!