ರಾಜಕೀಯ

ಕೂಡಿಗೆ ಗ್ರಾಪಂ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯೆಯ ಸದಸ್ವತ್ವ ಅನರ್ಹ ಆದೇಶ

ಕುಶಾಲನಗರ ಡಿ 12: ಕೂಡಿಗೆ ಗ್ರಾಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾಗಿರುವ ಮಂಗಳಾ ಪ್ರಕಾಶ್ ಅವರ ಸದಸ್ಯತ್ವ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಮಂಗಳ ಪ್ರಕಾಶ್ ಅವರು ಅಧ್ಯಕ್ಷರಾಗಿದ್ದ ಸಂದರ್ಭ ಸಾಮಾನ್ಯ ಸಭೆಗಳಿಗೆ ಗೈರಾಗುವುದು, ಅಭಿವೃದ್ಧಿ ಕಾರ್ಯಗಳಲ್ಲಿ ಸಹಕಾರ ನೀಡದೆ ನಿರ್ಲಕ್ಷ್ಯ ತೋರುವುದು, ಪತಿಯ ಹಸ್ತಕ್ಷೇಪ ವಿಚಾರಗಳನ್ನು ಮುಂದಿಟ್ಟು ದೂರು ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಡೆದ ವಿಚಾರಣೆ ಅನ್ವಯ ಸದಸ್ಯತ್ವ ರದ್ದುಗೊಳಿಸಿ ಮುಂದಿನ 6 ವರ್ಷ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶ ಹೊರಬಿದ್ದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!