ಕಾರ್ಯಕ್ರಮ

ಬಸವನತ್ತೂರು ಬೂತ್ ಸಂಖ್ಯೆ 146 ರ‌ಲ್ಲಿ‌ ಬೂತ್ ವಿಜಯ ಅಭಿಯಾನ

ಕುಶಾಲನಗರ, ಜ 06: ಬಿಜೆಪಿ‌ ಪಕ್ಷದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸೋಮವಾರಪೇಟೆ ಮಂಡಲದ ‌ಬಸವನತ್ತೂರು ಬೂತ್ ಸಂಖ್ಯೆ 146 ರಲ್ಲಿ ಬೂತ್ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಸಭೆ ನಡೆಯಿತು.
ಬೂತ್ ಅಧ್ಯಕ್ಷ ಆರ್.ಕೆ.ಕೃಷ್ಣ ಅಧ್ಯಕ್ಷತೆಯಲ್ಲಿ ಶಕ್ತಿ‌ ಕೇಂದ್ರದ ಪ್ರಮುಖ ಪ್ರವೀಣ್ ನಿವಾಸದಲ್ಲಿ ಸಭೆ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಬೂತ್ ಸಶಕ್ತೀಕರಣದ ಬಗ್ಗೆ ಮಾಹಿತಿ ನೀಡಿದರು.
ಬೂತ್ ರಚನೆ, ರಚಿಸಿರುವ ಬೂತ್ ಪರಿಶೀಲನೆ, ಪೇಜ್ ರಚನೆ, ಪೇಜ್ ಪ್ರಮುಖ‌ ನೇಮಕ, ವಾಟ್ಸಾಪ್ ಗ್ರೂಪ್ ರಚನೆ, ಮನೆ ಮೇಲೆ ಬಿಜೆಪಿ ಧ್ವಜಾರೋಹಣ, ಮನ್ ಕಿ‌ ಬಾತ್ ವೀಕ್ಷಣೆ, ಫಲಾನುಭವಿಗಳ‌ ಪಟ್ಟಿ ರಚನೆ,
ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಕರಪತ್ರ ಪ್ರಚಾರ ಕಾರ್ಯ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಸಚಿವ‌ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಜ.2 ಕ್ಕೆ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ‌ ದೊರೆತಿದ್ದು 12 ರವರೆಗೆ ಮುಂದುವರೆಯಲಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ‌ ಪಕ್ಷ ಅಧಿಕಾರಕ್ಕೆ ತರಲು ಬಿಜೆಪಿಗರು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.
ಎಂ ಎಲ್ ಸಿ ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯ ಯೋಜನೆ, ಸಾಧನೆಗಳ‌ ಬಗ್ಗೆ ತಿಳಿಸಿದರು.
ಈ ಸಂದರ್ಭ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ‌ ರವಿ‌ ಕಾಳಪ್ಪ, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಬಿಜೆಪಿ‌ ಮಾಜಿ ಅಧ್ಯಕ್ಷ ಬಿ.ಬಿ
ಭಾರತೀಶ್,
ಶಕ್ತಿ‌ ಕೇಂದ್ರದ ಪ್ರಮುಖರಾದ ಪ್ರವೀಣ್, ಮಂಜುನಾಥ್, ಬೂತ್ ಪ್ರಭಾರಿ‌ ಮನು, ಬೂತ್ ಉಪಾಧ್ಯಕ್ಷ ವರದ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!