ಆರೋಪ

ಚೀಟಿ ಹಣ ವಂಚನೆ‌ ಪ್ರಕರಣ: ಲಕ್ಷ್ಮಿ ಮತ್ತು ಐವರ ವಿರುದ್ದ ದೂರು ದಾಖಲು

ಕುಶಾಲನಗರ, ಡಿ‌ 24: ಮುಳ್ಳುಸೋಗೆ ಗ್ರಾಮದ‌ ಚಂದ್ರ ಎಂಬವರ ಪತ್ನಿ ಲಕ್ಷ್ಮಿ ಎಂಬ‌ ಮಹಿಳೆ ಚೀಟಿ ವ್ಯವಹಾರ ನಡೆಸಿ ರೂ 1.50 ಕೋಟಿಯಷ್ಟು ಹಣ ನೀಡದೆ ವಂಚಿಸಿರುವ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ವಂಚನೆಗೊಳಗಾದವರ ಪರವಾಗಿ ರವಿಕುಮಾರ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಲಕ್ಷ್ಮಿ ಆಕೆಯ ಪತಿ ಚಂದ್ರ, ಮಕ್ಕಳಾದ ರವಿ, ಅಶೋಕ, ಅಶ್ವಿನಿ, ಸಹಚರೆ ಸರಸ್ವತಿ ಎಂಬವರ ವಿರುದ್ದ ವಂಚನೆ ದೂರು ನೀಡಲಾಗಿದೆ.

ಕಳೆದೆರೆದು ವರ್ಷಗಳಿಂದ ವಿವಿಧ ಮೊತ್ತದ ಚೀಟಿ ವ್ಯವಹಾರ ನಡೆಸಿರುವ ಲಕ್ಷ್ಮಿ ಗ್ರಾಮದ ನೂರಾರು ಮಹಿಳೆಯರಿಗೆ ಹಣ ನೀಡಿದೆ ಸುಮಾರು 1.50 ಕೋಟಿಯಷ್ಟು ವಂಚನೆ ಮಾಡಲಾಗಿದೆ. ಕೇಳಲು ತೆರಳಿದರೆ ಹಲ್ಲೆಗೆ ಮುಂದಾಗುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಸಂತ್ರಸ್ಥರು ದೂರು‌ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!