ಪ್ರಕಟಣೆ

ಉದ್ಯಮಿ ಪುರುಷೋತ್ತಮ್ ರೈ ಗೆ ರಾಜ್ಯಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿ

ಕುಶಾಲನಗರ, ಡಿ.23: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ರಾಜ್ಯ ಮಟ್ಟದ ಡಾ. ಹೆಚ್.ಎನ್ ಪ್ರಶಸ್ತಿಗೆ ಜಿಲ್ಲೆಯಿಂದ ಕುಶಾಲನಗರದ ಉದ್ಯಮಿ ಪುರುಷೋತ್ತಮ ರೈ ಭಾಜರಾಗಿದ್ದಾರೆ.
ಪುರುಷೋತ್ತಮ ರೈ ಅವರು, ಕುಶಾಲನಗರದ ಪಿಆರ್‌ಸಿ ಸಂಸ್ಥೆಯ ಮಾಲೀಕರಾಗಿದ್ದು, ಅವರ ಉದ್ಯಮಶೀಲತೆ, ಪರಿಸರ ಸ್ನೇಹಿ ಚಟುವಟಿಕೆ ಮತ್ತಿತರ ಸಾಧನೆಗಳನ್ನು ಗುರುತಿಸಿ ಪರಿಷತ್ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಾಜ್ಯದಲ್ಲಿ ೩೭ ಸಾಧಕರನ್ನು ಡಾ. ಹೆಚ್.ಎನ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ತುಮಕೂರಿನಲ್ಲಿ ಡಿ.೨೮ ರಿಂದ ೨ ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಎರಡನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಷತ್‌ನ ಕೊಡಗು ಜಿಲ್ಲಾಧ್ಯಕ್ಷರಾದ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!