ಕುಶಾಲನಗರ, ಸೆ 13: ಗೋಣಿಕೊಪ್ಪ ಹಾಗೂ ಕುಶಾಲನಗರ ಚೆಸ್ಕಾo ಉಪ ವಿಭಾಗ ಕಛೇರಿಯಲ್ಲಿ ಜೆ.ಸಿ.ಐ. ಕುಶಾಲನಗರ ಕಾವೇರಿ ವತಿಯಿಂದ ವಿಶೇಷ ಕಾರ್ಯಾಗಾರ
ಜೆ.ಸಿ.ಐ. ಕುಶಾಲನಗರ ಕಾವೇರಿ ವತಿಯಿಂದ ಕುಶಾಲನಗರ ಹಾಗೂ ಗೋಣಿಕೊಪ್ಪಲಿನ ಸೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ ಹಾಗೂ ಹಣ ನಿರ್ವಹಣೆ ಕುರಿತು ಕಾರ್ಯಾಗಾರವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ರಾಷ್ಟ್ರೀಯ ಮಟ್ಟದ ಖ್ಯಾತ ತರಬೇತುದಾರ *ಜೆಸಿ ಪ್ರಜ್ವಲ್ ಜೈನ್* ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಅನುಸರಿಸಬಹುದಾದ practically ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಉಪವಿಭಾಗದ ಸ.ಕಾ.ಇಂ, ಪಾಲಿಬೆಟ್ಟ ಹಾಗೂ ಕುಶಾಲನಗರ, ಸುಂಟಿಕೊಪ್ಪ ಅಮ್ಮತ್ತಿ ಶಾಖಾಧಿಕಾರಿಗಳು ಹಾಗೂ ವಿಭಾಗ ಕಚೇರಿಯ ಪ್ರಭಾರ ಸ.ಕಾ.ಇಂ ಸೇರಿದಂತೆ ಅನೇಕ ಅಧಿಕಾರಿ/ಸಿಬ್ಬಂದಿ ಹಾಗೂ ಗುತ್ತಿಗೆದಾರ ಮಿತ್ರರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಜೆ.ಸಿ.ಐ. ಅಧ್ಯಕ್ಷೆ ಜೆಸಿ ತೇಜ ದಿನೇಶ್ ಹಾಗೂ ಜೆ.ಸಿ.ಐ. ಮಾಧ್ಯಮ ಸಂಯೋಜಕ ಜೆಸಿ ರಜನಿಕಾಂತ್ ಎಂ.ಜೆ ಉಪಸ್ಥಿತರಿದ್ದರು.
ಈ ಕಾರ್ಯಾಗಾರದ ಮೂಲಕ ಭಾಗವಹಿಸಿದವರಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಮರ್ಥ ನಿರ್ವಹಣೆಯ practically ಉಪಯೋಗಿಯಾಗುವ ಜ್ಞಾನವನ್ನು ಒದಗಿಸಲಾಯಿತು.
Back to top button
error: Content is protected !!