ಕುಶಾಲನಗರ, ಸೆ 13:ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಪಟ್ಟಣದಲ್ಲಿರುವ ವಾತ್ಸಲ್ಯ ಶಿಶು ಪಾಲನ ಕೇಂದ್ರಕ್ಕೆ ಅಮೃತಭಾವನ ಮಹಿಳಾ ಸಂಘದ ವತಿಯಿಂದ 9,000 ಬೆಲೆಬಾಳುವ ವಾಟರ್ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಹಾಗೂ ಅಮೃತಭಾವನ ಮಹಿಳಾ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಶಾಂತಿ, ಜಿಲ್ಲಾ ಮತ್ತು ರಾಜ್ಯಮಟ್ಟದ ಶ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರೆಹನಾ, ತಾಲ್ಲೂಕು ಅಧ್ಯಕ್ಷೆ ಹೇಮಾ, ಶಿಶು ಪಾಲನ ಕೇಂದ್ರದ ಶಿಕ್ಷಕಿ ರಂಜಿತಾ, ಅಮೃತ ಭಾವನ ಮಹಿಳಾ ಸಂಘದ ಸದಸ್ಯರಾದ ಸುನೀತಾ, ಗೀತಾ, ಕವಿತಾ, ಆಶಾ, ರೂಪ, ಲಲಿತಮ್ಮ, ಶೋಭಾ, ಶಿವಮ್ಮ, ಶಾರದಮ್ಮ, ಸವಿತಾ, ಲಲಿತ, ಸೌಮ್ಯ, ಹರ್ಷಿತ, ಶಾಂತಿ, ಭವ್ಯ, ಗೀತಾ, ಶಿಲ್ಪ, ಮಮತಾ, ಕಾವೇರಿ, ಭಾನುಮತಿ ಸೇರಿದಂತೆ ಸಹಾಯಕಿಯರು ಪೋಷಕರು ಉಪಸ್ಥಿತರಿದ್ದರು.
Back to top button
error: Content is protected !!