ಕುಶಾಲನಗರ, ಅ 18: ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ನಾಲೆಗಳಿಗೆ ಹರಿಸುತ್ತಿದ ನೀರನ್ನು ಸ್ಥಗಿತಗೊಳಿಸಲಾಯಿತು.
ಹಾರಂಗಿ ಅಚ್ಚುಕಟ್ಟು ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ನಾಲೆಯ ಮೇಲ್ಬಾಗದ ಜಮೀನುಗಳ ನೀರು ನಾಲೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳವರೆಗೆ ಹಾರಂಗಿ ನಾಲೆ ನೀರನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 8 ದಿನಗಳಿಂದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಾದ ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷಿ ಭೂಮಿ ನೀರು ನಾಲೆಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ನಾಲೆ ನೀರು ಮತ್ತು ಮಳೆಯ ನೀರು ಹೆಚ್ಚುವರಿಯಾಗಿ ಮುಖ್ಯ ನಾಲೆ ಮತ್ತು ಉಪ ನಾಲೆಯ ಕಾಲುವೆಗಳಿಗೆ ತೊಂದರೆ ಅಗಬಹುದೆಂದು ಮುನ್ನೆಚ್ಚರಿಕೆಯಾಗಿಕೆಲ ದಿನಗಳವರೆಗೆ ನಾಲೆಯ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ನೀರಾವರಿ ನಿಗಮ ಹಾರಂಗಿ ಅಣೆಕಟ್ಟೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.
Back to top button
error: Content is protected !!