ಕುಶಾಲನಗರ, ಜ 03: ಸೋಮವಾರಪೇಟೆಯ ಶಾಂತಳ್ಳಿ ವಲಯದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿನಾಂಕ;03.01.2025ರಂದು ಸಾಮೂಹಿಕ ನವಗ್ರಹ ಪೂಜಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿ ಸಭಾ ಕಾರ್ಯಕ್ರಮ ನಡೆಯಿತು. ಸಬಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐಗೂರು ಮುತ್ತಪ್ಪಸ್ವಾಮಿ ದೇವಸ್ಥಾನಕ್ಕೆ 2 ಲಕ್ಷ ಹಾಗೇ ಹರಿಹರ ಯುವಕ ಮಂಡಲದ ಸಮುದಾಯ ಭವನಕ್ಕೆ 2 ಲಕ್ಷ ಹಾಗೂ ಗರಗಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸತೋಟ ಗ್ರಾಮಕ್ಕೆ ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರ ವಿತರಣೆ ಮಾಡಿದರು.ಹಾಗೂ ಯಡೂರು ಸಮುದಾಯ ಭವನಕ್ಕೆ 1.50 ಲಕ್ಷ ಅನುದಾನದ ಮಂಜುಆರಾತಿ ಪತ್ರ ವಿತರಿಸಿದರು. ಕಾರ್ಯರ್ಕ್ರಮದ ಅದ್ಯಕ್ಷತೆಯನ್ನು ಗೋಪಾಲಕೃಷ್ಣ ವಹಿಸಿದರು. ವೇದಿಕೆಯಲ್ಲಿ ಶಿವಕುಮಾರ್ ಅಧ್ಯಕ್ಷರು ಪಿ ಎ ಸಿ ಎಸ್, ಜಿ ಕೆ ವಿನೋದ್ ಗ್ರಾ.ಪಂ ಅದ್ಯಕ್ಷರು, ಸಬಿತಾ ಚನ್ನ ಕೇಶವ ಮಾಜಿ ತಾ. ಪಂ ಸದಸ್ಯರು,ಚಂಗಪ್ಪವಿ.ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕರು, ಕೆ.ಪಿ ದಿನೇಶ್ ಮಾಜಿ ಗ್ರಾ.ಪಂ ಸದಸ್ಯರು, ಎಲ್ ಎಮ್ ರಾಜೇಶ್ ಲಿಂಗೇರಿ ಹಾಗೂ ತಾಲೂಕು ಯೋಜನಾಧಿಕಾರಿಗಳಾದ ರೋಹಿತ್ ಹೆಚ್ ರವರು ಉಪಸ್ಥಿತರಿದ್ದರು ಮೇಲ್ವಿಚಾರಕರಾದ ಲಕ್ಷ್ಮಣ ಹಾಗೂ ಸೇವಾಪ್ರತಿನಿಧಿ ಚೆನ್ನಮ್ಮ ಕಾರ್ಯರ್ಕ್ರಮ ನಿರೂಪಿಸಿದರು.
Back to top button
error: Content is protected !!