ಕ್ರೈಂ

ಕುಶಾಲನಗರ: 65 ಸಾವಿರ ಮೌಲ್ಯದ 2 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ‌ ಬಂಧನ

ಕುಶಾಲನಗರ, ಅ 08: ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಕುಶಾಲನಗರ ಪೊಲೀಸರು ಇಬ್ಬರನ್ನು ಬಂಧಿಸಿ 65 ಸಾವಿರ ಮೌಲ್ಯದ 2.125 ಕೆಜಿ ಒಣಗಿದ ಗಾಂಜಾ ವಶಕ್ಕೆ‌ ಪಡೆದಿದ್ದಾರೆ.
ಮೈಸೂರಿನ ರಿಂಗ್ ರಸ್ತೆಯ ಮುನಾವರ್ ಖಾನ್ ಪುತ್ರ ಆಟೋ ಚಾಲಕ ಮುಜಾಹಿದ ಪಾಷಾ ಹಾಗೂ ಸುಂಟಿಕೊಪ್ಪದ ಅಬ್ದುಲ್ ಸತ್ತಾರ್ ಪುತ್ರ ಲೋಡರ್ ಮಹಮ್ಮದ್ ರಫೀಕ್ ಬಂಧಿತ ಆರೋಪಿಗಳು.
ಆನೆಕಾಡು ಬಳಿಕ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ‌ ಬಳಸಿದ್ದ ಮಾರುತಿ 800 ಕಾರು, ಎರಡು‌ ಮೊಬೈಲ್ ಫೋನ್, ಒಂದು ಆಟೋ ರಿಕ್ಷಾ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಅಧೀಕ್ಷಕರಾದ ಎಂ.ಎ.ಅಯ್ಯಪ್ಪ ಅವರ‌ ನಿರ್ದೇಶನದಂತೆ, ಉಪ ಅಧೀಕ್ಷಕ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಎಚ್.ವಿ.ಚಂದ್ರಶೇಖರ್, ಭಾರತಿ, ಪ್ರೊ, ಪಿಎಸ್ಐ ಕಾಶಿನಾಥ್, ಎಎಸ್ಐ ಕುಮಾರಿ, ಬಿ.ಎಸ್.ವಿಠಲ, ಸಿಬ್ಬಂದಿಗಳಾದ ಲೋಕೇಶ್, ಶಿವಕುಮಾರ, ಮಂಜುನಾಥ್, ಅಜಿತ್, ಪ್ರಕಾಶ್, ಸಂದೇಶ್, ರಮೇಶ್, ದಿವೇಶ್, ಕಾಂತಿ, ಹರ್ಷಾವತಿ, ಸುಂಟಿಕೊಪ್ಪ ಠಾಣೆಯ ಉದಯ, ಪ್ರವೀಣ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ‌ ಪಾಲ್ಗೊಂಡಿದ್ದರು. ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!