ಪ್ರಕಟಣೆ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದೂರು ದಾಖಲು

ಕೊಡಗು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ

ಕುಶಾಲನಗರ, ಮಾ 21: 2024 ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕೊಡಗು ಜಿಲ್ಲಾ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕುರಿತು ನೋಡಲ್ ಅಧಿಕಾರಿ, ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕೊಡಗು ಜಿಲ್ಲೆ ರವರಿಂದ ವಿವರಣೆ ಪಡೆದು ಪರಿಶೀಲಿಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

> ಶ್ರೀಮತಿ ಯಮುನಾ ಚಂಗಪ್ಪ@ ಯಮುನಾ ಅಕ್ಕಮ್ಮ ಕಾರ್ಮಾಡು ಗ್ರಾಮ ವಿರಾಜಪೇಟೆ ಎಂಬುವವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಕಾಂಗ್ರೇಸ್ ಪಕ್ಷದ ವಿರುದ್ಧ ಸುಳ್ಳು ಸುದ್ದಿಯನ್ನು ಹರಿ ಬಿಟ್ಟಿರುವ ಬಗ್ಗೆ ದೂರು ಸ್ವೀಕರಿಸಿದ್ದು, ಈ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡದಂತೆ ಕಲಂ: 107 ಸಿಆರ್‌ಪಿಸಿ ಅಡಿಯಲ್ಲಿ ಶ್ರೀಮತಿ ಯಮುನಾ ಚಂಗಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

> ಶ್ರೀ ಐ.ಜಿ.ಚಿಣ್ಣಪ್ಪ, ಮಡಿಕೇರಿ ಎಂಬುವವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ತಮ್ಮ ಖಾತೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಭಾವಚಿತ್ರವನ್ನು ಅಸಂಬದ್ಧವಾಗಿ ಹಾಗೂ ಅವಹೇಳನಕರವಾಗಿ ಚಿತ್ರಿಸಿರುವುದನ್ನು ಪೋಸ್ಟ್ ಮಾಡಿರುವ ಬಗ್ಗೆ ದೂರು ಸ್ವೀಕರಿಸಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡದಂತೆ ಕಲಂ: 107 ಸಿಆ‌ರ್ ಪಿಸಿ ಅಡಿಯಲ್ಲಿ ಶ್ರೀ ಐ.ಜಿ. ಚಿಣ್ಣಪ್ಪ ರವರ ಮೇಲೆ ಕಾನೂನು: ಕ್ರಮ ಕೈಗೊಳ್ಳಲಾಗಿರುತ್ತದೆ.

ಶ್ರೀಮತಿ ಯಮುನಾ ಚಂಗಪ್ಪ ಹಾಗೂ ಶ್ರೀ ಐ.ಜಿ. ಚಿಣ್ಣಪ್ಪ ರವರುಗಳಿಂದ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡದಂತೆ Good Bond Behavior ಅನ್ನು ಬರೆಸಿಕೊಳ್ಳಲಾಗಿರುತ್ತದೆ.

: 03-03-2024 50 Sudhakar rao @Imsudhakarrao ৯০৯) (Twitter) ಖಾತೆಯಲ್ಲಿ ಸುಳ್ಳು ಸಂದೇಶವನ್ನು ಬರೆದು ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣ N (Twitter) ಖಾತೆಯಲ್ಲಿ ಸುಳ್ಳು ಸುದ್ದಿಯನ್ನು ಹರಿಬಿಟ್ಟು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಮಾಡಿರುವ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 19-03-2024 ರಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಿ ಮೂಲತಃ ಕಾರ್ಕಳ, ಉಡುಪಿ ಜಿಲ್ಲೆ ಪ್ರಸ್ತುತ ಉತ್ತರರಪ್ರದೇಶ ರಾಜ್ಯ ಮುಜಾಫರ್‌ನಗರ ಜಿಲ್ಲೆ ಖತೋಲಿಯ ನಿವಾಸಿಯಾದ ಸುಧಾಕರ ರಾವ್, 55 ವರ್ಷ ಎಂಬುವವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!